ತಂತ್ರಜ್ಞಾನ

ಟಾಟಾ ಮೋಟಾರ್ಸ್‌ ಕಾರು ದರ ಏರಿಕೆ

ಹೊಸದಿಲ್ಲಿ: ಟಾಟಾ ಮೋಟಾರ್ಸ್‌ ಕಂಪನಿಯು ತನ್ನ ಕಾರ್‌ಗಳ ದರವನ್ನು 25,000 ರೂ. ತನಕ ಏರಿಕೆ ಮಾಡಿದೆ. ಏಪ್ರಿಲ್‌ನಿಂದ ಪರಿಷ್ಕೃತ ದರಗಳು ಅನ್ವಯವಾಗಲಿವೆ ಎಂದು ಶನಿವಾರ ಹೊರಡಿಸಲಾದ ಪ್ರಕಟಣೆಯಲ್ಲಿ ಕಂಪನಿ ಹೇಳಿದೆ. ತಯಾರಿಕಾ ವೆಚ್ಚ ಮತ್ತು ಹಣಕಾಸು ಮಾರುಕಟ್ಟೆಯನ್ವಯ ದರಗಳನ್ನು ಏರಿಕೆ ಮಾಡಲಾಗಿದೆ. ಪ್ರಸ್ತುತ ನ್ಯಾನೊ ಕಾರ್‌ನಿಂದ ಪ್ರೀಮಿಯಂ ಎಸ್‌ಯುವಿ ಹೆಕ್ಸಾ ತನಕ, 2.36 ಲಕ್ಷ ರೂ.ನಿಂದ 18.37 ಲಕ್ಷ ರೂ. ಬೆಲೆಗಳಲ್ಲಿ ನಾನಾ ಮಾಡೆಲ್‌ನ ಕಾರುಗಳನ್ನು ಟಾಟಾ ಮೋಟಾರ್ಸ್‌ ಮಾರಾಟ ಮಾಡುತ್ತಿದೆ. ಇವುಗಳ ದರಗಳು ಮುಂದಿನ ತಿಂಗಳು ಏರಿಕೆಯಾಗಲಿವೆ. ”ಬದಲಾದ ಮಾರುಕಟ್ಟೆ ಪರಿಸ್ಥಿತಿ, ಉತ್ಪಾದನಾ ವೆಚ್ಚಗಳ ಏರಿಕೆಯಿಂದಾಗಿ ವಾಹನಗಳ ದರ ಏರಿಕೆ ಅನಿವಾರ್ಯ,” ಎಂದು ಟಾಟಾ ಮೋಟಾರ್ಸ್‌ನ ಪ್ಯಾಜೆಂಜರ್‌ ವೆಹಿಕಲ್‌ ಬ್ಯುಸಿನೆಸ್‌ ಘಟಕದ ಅಧ್ಯಕ್ಷ ಮಾಯಾಂಕ್‌ ಪರೇಕ್‌ ಹೇಳಿದ್ದಾರೆ. ಜಾಗ್ವಾರ್‌ ಲ್ಯಾಂಡ್‌ ರೋವರ್‌ ಮತ್ತು ಟೊಯೋಟಾ ಕಂಪನಿಗಳು ಆಯ್ದ ಮಾಡೆಲ್‌ಗಳ ದರವನ್ನು ಏಪ್ರಿಲ್‌ನಿಂದ ಹೆಚ್ಚಿಸುವುದಾಗಿ ಈಗಾಗಲೇ ಹೇಳಿದ್ದು, ಈ ಸಾಲಿಗೆ ಟಾಟಾ ಮೋಟಾರ್ಸ್‌ ಈಗ ಸೇರ್ಪಡೆಯಾಗಿದೆ.

 

About the author

ಕನ್ನಡ ಟುಡೆ

Leave a Comment