ರಾಷ್ಟ್ರ ಸುದ್ದಿ

ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಹಿರಿಯ ನಾಯಕ ದಿಗ್ವಿಜಯ್‌, ಸಿಂಧಿಯಾ ಕಿತ್ತಾಟ

ಭೋಪಾಲ್‌: ಮಧ್ಯಪ್ರದೇಶದಲ್ಲಿ ಅಕಾರಕ್ಕೆ ಬರಲು ಹವಣಿಸುತ್ತಿರುವ ಕಾಂಗ್ರೆಸ್‌ನಲ್ಲೀಗ ಟಿಕೆಟ್‌ ಹಂಚಿಕೆ ವಿಚಾರವಾಗಿ ಆಂತರಿಕ ಕಲಹ ತೀವ್ರಗೊಂಡಿದೆ. ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸಮ್ಮುಖದಲ್ಲಿಯೇ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್‌ ಹಾಗೂ ಜ್ಯೋತಿರಾತ್ಯ ಸಿಂಧಿಯಾ ಪರಸ್ಪರ ಬೈದಾಡಿಕೊಂಡಿರುವುದು ವರದಿಯಾಗಿದೆ.

ನವೆಂಬರ್‌ 28ರಂದು ಮಧ್ಯಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದು, ರಾಹುಲ್‌ ಗಾಂಧಿ ಅವರು ಚುನಾವಣಾ ಪ್ರಚಾರ ಕೈಗೊಂಡಿದ್ದ ಅವಧಿಯಲ್ಲಿಯೇ ದಿಗ್ವಿಜಯ್‌ ಸಿಂಗ್‌ ಮತ್ತು ಸಿಂಯಾ ನಡುವಿನ ವೈಮನಸ್ಸು ಭುಗಿಲೆದ್ದಿರುವುದು ಕಾಂಗ್ರೆಸ್‌ಗೆ ತಲೆನೋವಾಗಿ ಪರಿಣಮಿಸಿದೆ. ಬಿಕ್ಕಟ್ಟು ನಿವಾರಣೆಗೆ ರಾಹುಲ್‌ ಅವರು ಅಶೋಕ್‌ ಗೆಹ್ಲೋಟ್‌, ವೀರಪ್ಪ ಮೊಯ್ಲಿ, ಅಹ್ಮದ್‌ ಪಟೇಲ್‌ ನೇತೃತ್ವದಲ್ಲಿ ಸಮಿತಿ ರಚಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಈ ಬಗ್ಗೆ ಕಾಂಗ್ರೆಸ್‌ ತುಟಿಬಿಚ್ಚಿಲ್ಲ. ರಾಜ್ಯದಲ್ಲಿ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಕಮಲ್‌ನಾಥ್‌ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ಜ್ಯೋತಿರಾತ್ಯ ಸಿಂಧಿಯಾ ಪೈಕಿ ಯಾರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಬೇಕು ಎನ್ನುವುದೇ ಇನ್ನೂ ತೀರ್ಮಾನವಾಗಿಲ್ಲ. ಈ ರೇಸ್‌ನಲ್ಲಿ ತಾವೂ ಇರುವುದಾಗಿ ದಿಗ್ವಿಜಯ್‌ ಸಿಂಗ್‌ ವರಿಷ್ಠರಿಗೆ ಸೂಚನೆ ರವಾನಿಸಿದ್ದಾರೆ. ಟಿಕೆಟ್‌ ಹಂಚಿಕೆ ಸಂದರ್ಭದಲ್ಲಿ ತಮ್ಮ ನಾಯಕತ್ವ ಕಡೆಗಣಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ದಿಗ್ವಿಜಯ್‌, ತಮ್ಮ ಬೆಂಬಲಿಗ 57 ಜನರಿಗೆ ಟಿಕೆಟ್‌ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಇದೇ ವಿಷಯದಲ್ಲಿ ಸಿಂಧಿಯಾ ಜತೆ ಕಿತ್ತಾಡಿಕೊಂಡ ಬೆನ್ನಲ್ಲೇ ಅವರು, ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಅವರಿಗೆ ಅ.27ರಂದು ಪತ್ರ ಬರೆದು ಬೇಡಿಕೆ ಮುಂದಿಟ್ಟಿದ್ದಾರೆಂದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿದೆ. ಪತ್ರದಲ್ಲಿ ಪಕ್ಷದ ಕೇಂದ್ರ ಚುನಾವಣಾ ಸಮಿತಿಯು ಟಿಕೆಟ್‌ ನೀಡಿಕೆಯಲ್ಲಿ ದಂಧೆ ನಡೆಸುತ್ತಿದೆ ಎಂದೂ ಆರೋಪಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಬಳಿಕ, ಪತ್ರ ನಕಲಿ ಎಂದು ದಿಗ್ವಿಜಯ್‌ ಸಿಂಗ್‌ ಅವರು ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment