ರಾಷ್ಟ್ರ

ಟಿಡಿಪಿ ಸಮಸ್ಯೆಯನ್ನು ಕಾವೇರಿಗೆ ಹೋಲಿಕೆ ಮಾಡಬೇಡಿ ಪನ್ನೀರ್ ಸೆಲ್ವಂ

ಚೆನ್ನೈ: ಆಂಧ್ರ ಪ್ರದೇಶದ ತೆಲುಗು ದೇಶಂ ಪಕ್ಷದ ಸಮಸ್ಯೆಯನ್ನು ಕಾವೇರಿ ಸಮಸ್ಯೆಗೆ ಹೋಲಿಕೆ ಮಾಡಬೇಡಿ ಎಂದು ತಮಿಳುನಾಡು ಉಪ ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಹೇಳಿದ್ದಾರೆ.

ಇಂದು ಚೆನ್ನೈನಲ್ಲಿ ಮಾತನಾಡಿದ ಪನ್ನೀರ್ ಸೆಲ್ವಂ ಅವರು ಕಾವೇರಿ ವಿಚಾರವನ್ನು ಆಂಧ್ರ ಪ್ರದೇಶದ ಸಮಸ್ಯೆಗೆ ಹೋಲಿಕೆ ಮಾಡಬೇಡಿ. ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಲು ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಸ್ಟಾಲಿನ್ ಗೆ ತಿರುಗೇಟು ನೀಡಿದ ಪನ್ನೀರ್ ಸೆಲ್ವಂ

ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ನಮ್ಮ ಆಗ್ರಹ ಮುಂದುವರೆಯಲಿದ್ದು ಪ್ರತಿಭಟನೆ ಮುಂದುವರೆಯಲಿದೆ. ಈ ಹಿಂದೆ ಕಾವೇರಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ 6 ವಾರಗಳ ಕಾಲಾವಕಾಶ ನೀಡಿದೆ. ಅಲ್ಲಿಯವರೆಗೂ ಕಾದು ನೋಡೋಣ. ಬಳಿಕ ಮುಂದಿನ ನಿರ್ಧಾರದ ಕುರಿತು ಆಲೋಚಿಸೋಣ ಎಂದು ಹೇಳಿದ್ದಾರೆ.

 

About the author

ಕನ್ನಡ ಟುಡೆ

Leave a Comment