ರಾಜ್ಯ ಸುದ್ದಿ

ಟಿಪ್ಪು ಜಯಂತಿ ಆಚರಣೆ ಕೈಬಿಡಲ್ಲ: ಸಿಎಂ

ಬೆಂಗಳೂರು: ಟಿಪ್ಪು ಜಯಂತಿ ಆಚರಣೆ ಹಿಂದಿನ ಸರಕಾರದಿಂದ ಆರಂಭವಾಗಿದ್ದು, ಈ ವರ್ಷವೂ ಅದು ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ‘ಹಿಂದಿನ ಕಾಂಗ್ರೆಸ್‌ ಸರಕಾರ ಪ್ರಕಟಿಸಿರುವ ಯೋಜನೆ ಹಾಗೂ ಕಾರ್ಯಕ್ರಮ ಮುಂದುವರಿಸಲು ಬದ್ಧನಾಗಿರುವೆ. ಅದರಂತೆ ಟಿಪ್ಪು ಜಯಂತಿಯೂ ನಡೆಯಲಿದೆ,” ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಟಿಪ್ಪು ಜಯಂತಿ ಆಚರಣೆ ಕೈಬಿಡಬೇಕೆಂದು ಬಿಜೆಪಿ ಸೇರಿದಂತೆ ಸಂಘ ಪರಿವಾರದ ಮುಖಂಡರು ಸರಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಆದರೆ ಈಗ ಜಯಂತಿ ಆಚರಣೆ ಮುಂದುವರಿಯಲಿದೆ ಎಂದು ಸಿಎಂ ಹೇಳಿದ್ದಾರೆ. ‘ಸರ್ವ ಜನಾಂಗದ ಶಾಂತಿಯ ತೋಟ..’ ಎಂಬ ಕುವೆಂಪು ವಿರಚಿತ ನಾಡಗೀತೆಯ ಸಾರ ಬಿಜೆಪಿ ಮುಖಂಡರಿಗೆ ತಿಳಿದಿಲ್ಲ ಎಂದು ಎಚ್‌ಡಿಕೆ ಟೀಕಿಸಿದರು.

About the author

ಕನ್ನಡ ಟುಡೆ

Leave a Comment