ಸುದ್ದಿ

ಟಿ.ಆರ್.ಪಿ ಇಲ್ಲದೇ ಉದಯ ನ್ಯೂಸ್ ಚಾನೆಲ್ ಸ್ಥಗಿತಗೊಳ್ಳಲಿದೆಯಾ?

ಕರ್ನಾಟಕದ ಮೊಟ್ಟ ಮೊದಲ 24/7 ಸುದ್ದಿ ವಾಹಿನಿ ಉದಯ ನ್ಯೂಸ್ ಇನ್ನೆರಡು ತಿಂಗಳಲ್ಲಿ ನೆನಪು ಮಾತ್ರ! ಈ ವಾಹಿನಿಯನ್ನು ಮುಚ್ಚಲು ಸನ್ ಟಿವಿ ನೆಟ್ ವರ್ಕ್ ನಿರ್ಧರಿಸಿದೆ. ಈ ಸಂಬಂಧ ಕಾರ್ಮಿಕ ಇಲಾಖೆಗೆ ಪತ್ರ ಬರೆದಿರುವ ಸನ್ ಟಿವಿ ಉಪಾಧ್ಯಕ್ಷ ಜವಾಹರ್ ಮೈಕಲ್ ಅಕ್ಟೋಬರ್ 24ಕ್ಕೆ ಉದಯ ಸುದ್ದಿ ವಾಹಿನಿ ಸ್ಥಗಿತಗೊಳ್ಳಲಿದೆ ಎಂದು ತಿಳಿಸಿದ್ದಾರೆ.

‘ಕರ್ನಾಟಕದಲ್ಲಿ ಕಳೆದ 19 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಉದಯ ನ್ಯೂಸ್ ಗೆ ಒಳ್ಳೆಯ ಮಾರುಕಟ್ಟೆ ದೊರೆಯಲು ಸಾಕಷ್ಟು ಬಂಡವಾಳ ಹೂಡಲಾಗಿದೆ. ನಮ್ಮ ನಿರಂತರ ಪ್ರಯತ್ನದ ಫಲವಾಗಿಯೂ ಕಳೆದೆರಡು ವರ್ಷಗಳಿಂದ ವಾಹಿನಿಯ ತೀವ್ರವಾದ ನಷ್ಟಕ್ಕೆ ಒಳಗಾಗಿದೆ.

‘ಇತರ ವಾಹಿನಿಗಳ ಸ್ಪರ್ಧೆಗಳ ನಡುವೆ ಉದಯ ನ್ಯೂಸ್ ಗೆ ವೀಕ್ಷಕರ ಸಂಖ್ಯೆ ಗಣನೀಯವಾಗಿ ಕುಸಿಯುತ್ತಾ ಬಂದಿದೆ. ಹಾಗಾಗಿ ಇದರ ಮೇಲೆ ಮತ್ತೆ ಮತ್ತೆ ಬಂಡವಾಳ ಹೂಡುವ ಯಾವುದೇ ಕಾರಣಗಳು ನಮಗೆ ಕಾಣುತ್ತಿಲ್ಲ.

 

ಈ ವಾಹಿನಿಯಲ್ಲಿ ಕೆಲಸ ಮಾಡುವ 73 ಸಿಬ್ಬಂದಿಗಳ ಸೇವೆಯನ್ನು ಕೊನೆಗೊಳಿಸುವುದರೊಂದಿಗೆ ಅಕ್ಟೋಬರ್ 24ಕ್ಕೆ ಉದಯ ಸುದ್ದಿವಾಹಿನಿಯ ಪ್ರಸಾರ ಕೊನೆಗೊಳ್ಳಲಿದೆ’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment