ಕ್ರೀಡೆ

ಟಿ–20 ಬಳಿಕ ಬರುತ್ತಿದೆ 100 ಬಾಲ್ ಕ್ರಿಕೆಟ್!

ಟಿ 20 ಕ್ರಿಕೆಟ್ ಆರಂಭವಾಗಿ ಹತ್ತಿರ ಹತ್ತಿರ 18 ವರ್ಷವಾಗುತ್ತಾ ಬಂತು… ವಿಶ್ವದ ಶ್ರೀಮಂತ ಟಿ20 ಲೀಗ್ ಐಪಿಎಲ್ ಈಗತಾನೇ 10 ವರ್ಷಗಳ ಸಂಭ್ರಮ ಪೂರೈಸಿದೆ. ಟಿ20 ಮಾದರಿ ವಿಶ್ವದಲ್ಲಿ ಕ್ರೇಜ್ ಹುಟ್ಟಿಸಿರುವ ನಡುವೆ ಇಂಗ್ಲೆಂಡ್ ಹಾಗು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಹೊಸ ಯೋಚನೆಯನ್ನು ಜಗತ್ತಿಗೆ ನೀಡಿದೆ. ಅದುವೇ. 100… ಬಾಲ್  ಕ್ರಿಕೆಟ್

ಅಚ್ಚರಿಯ ಬೆಳವಣಿಗೆಯಲ್ಲಿ ಇಂಗ್ಲೆಂಡ್ ಮಂಡಳಿ ಎಂಟು ತಂಡಗಳ ಈ ದೇಶೀಯ ಟೂರ್ನಿಯಲ್ಲಿ ಇದನ್ನು ಪರಿಚಯಿಸಲು ಮುಂದಾಗಿದೆ. 2020ರಲ್ಲಿ ಮೊದಲ ಟೂರ್ನಿ ನಡೆಯಲಿದ್ದು, ಗುರುವಾರ ಇದನ್ನು ಅಧಿಕೃತವಾಗಿ ಪ್ರಕಟಿಸಿದೆ. ತಲಾ 100 ಎಸೆತಗಳ ಎರಡು ಇನಿಂಗ್ಸ್ ಗಳು ಪಂದ್ಯದಲ್ಲಿ ಇರಲಿದೆ. ಸಾಂಪ್ರದಾಯಿಕ ಟಿ20 ಮಾದರಿಯಲ್ಲಿ 120 ಎಸೆತಗಳ ಎರಡು ಇನಿಂಗ್ಸ್ ಇರುತ್ತವೆ. ಎಲ್ಲ ಕೌಂಟಿ ತಂಡಗಳ ಚೇರ್ಮೆನ್ ಹಾಗು ಮುಖ್ಯ ವ್ಯವಸ್ಥಾಪಕರುಗಳ ಸಭೆಯಲ್ಲಿ ಇಸಿಬಿ ಹೊಸ ಮಾದರಿಯ ಕ್ರಿಕೆಟ್‌ಅನ್ನು ಪರಿಚಯಿಸಿದ್ದು, ಎಲ್ಲರಿಂದಲೂ ಸರ್ವಾನುಮತದ ಒಪ್ಪಿಗೆ ಸಿಕ್ಕಿದೆ. 2003ರಲ್ಲಿ ಇಸಿಬಿ ಆಡಿಸಿದ್ದ ಟ್ವೆಂಟಿ20 ಕಪ್ ಟೂರ್ನಿ ಯ ಬಳಿಕ ಇಂಗ್ಲೆಂಡ್ ಕ್ರಿಕೆಟ್ ನಲ್ಲಿ ಮಾಡುತ್ತಿರುವ ಅತಿ ದೊಡ್ಡ ಬದಲಾವಣೆಯ ಶಿಫಾರಸು ಇದಾಗಿದೆ.

10 ಎಸೆತಗಳ ಓವರ್!

100 ಎಸೆತಗಳ ಇನಿಂಗ್ಸ್ ಎಂದರೆ 16.4 ಓವರ್‌ಗಳ ಆಟ, ಆದರೆ, ಇಸಿಬಿ ಈ ಮಾದರಿಯಲ್ಲೂ ಬದಲಾವಣೆ ಮಾಡಿದೆ. 100 ಬಾಲ್ ಕ್ರಿಕೆಟ್ ನಲ್ಲಿ ತಲಾ 6 ಎಸೆತಗಳ 15 ಓವರ್‌ಗಳಿದ್ದರೆ, ಅಂತಿಮ ಓವರ್‌ನಲ್ಲಿ 10 ಎಸೆತಗಳಿರಲಿವೆ! ಐದು ವಾರಗಳ ಕಾಲ ಈ ಟೂರ್ನಿ ನಡೆಯಲಿದೆ. ಬರ್ಮಿಂಗ್ಹ್ಯಾಂ, ಲೀಡ್ಸ್, ಲಂಡನ್, ಮ್ಯಾಂಚೆಸ್ಟರ್, ಕಾರ್ಡಿಫ್ ನಾಟಿಂಗ್‌ಹ್ಯಾಂನಲ್ಲಿ ಪಂದ್ಯಗಳು ನಡೆಯಲಿವೆ. ಫ್ ಹಾಗು ಲಾರ್ಡ್ಸ್ ಹಾಗು ಓವಲ್ ಮೈದಾನಗಳು ಲಂಡನ್ ಮೂಲಕ ಕೌಂಟಿ ತಂಡದ ತವರು ಸ್ಥಳವಾಗಿರಲಿದೆ.

ಗಂಟೆ ಪ೦ದ್ಯ

ಪ್ರತಿ ಇನಿಂಗ್ಸ್ ನಲ್ಲಿ 20 ಎಸೆತಗಳು ಕಡಿಮೆ ಆಗಲಿರುವ ಕಾರಣ ಪಂದ್ಯ ಮೂರು ಗಂಟೆಯ ಅವಧಿಯಲ್ಲಿ ಮುಕ್ತಾಯ ಕಾಣಲಿದೆ. ಸಂಜೆ 6 ಗಂಟೆಯ ಪಂದ್ಯ ರಾತ್ರಿ 9ಕ್ಕೆ ಮುಕ್ತಾಯ ಕಾಣಲಿದೆ.

ಎಂಸಿಸಿ ನಿಯಮವೇ ಅಡ್ಡಿ

ಇಸಿಬಿಯ ಘೋಷಣೆ ನಡುವೆ 10 ಎಸೆತಗಳ ಓವರ್‌ಗೆ ಎಂಸಿಸಿ ನಿಯಮವೇ ಅಡ್ಡಿಯಾಗಲಿದೆ. ಎಂಸಿಸಿಯ ನಿಯಮ 17.1ರ ಪ್ರಕಾರ, ಕ್ರಿಕೆಟ್ ಪಂದ್ಯದ ಒಂದು ಓವರ್ 6 ಎಸೆತಗಳಿಗೆ ಸೀಮಿತವಾಗಿರಬೇಕು’ ಎಂದು ಹೇಳಿದೆ.

About the author

ಕನ್ನಡ ಟುಡೆ

Leave a Comment