ಕ್ರೀಡೆ

ಟಿ20: ಕೊಹ್ಲಿ, ಧೋನಿ ಸಿಡಿಲಬ್ಬರದ ಬ್ಯಾಟಿಂಗ್, ಆಸ್ಟ್ರೇಲಿಯಾಗೆ 191ರನ್ ಟಾರ್ಗೆಟ್

ಬೆಂಗಳೂರು: ಭಾರತ-ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟಿ೨೦ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗಿಳಿದಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ನಾಯಕ ಧೋನಿ ಉತ್ತಮ ಬ್ಯಾಟಿಂಗ್ ನೆರವಿನಿಂದ ನಿಗದಿತ  20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿದೆ. ಈ ಮೂಲಕ ಅಸೀಸ್ ಪಡೆಗೆ ಗೆಲ್ಲಲು 191ರನ್ ಸವಾಲಿನ ಮೊತ್ತ ನೀಡಿದೆ. 

ಆರಂಭಿಕರಾದ ಕೆಎಲ್ ರಾಹುಲ್ ಹಾಗೂ ಶಿಖರ್ ಧವನ್ ಮೊದಲ ನಾಲ್ಕು ಓವರ್ ಗಳಲ್ಲಿ 24 ರನ್ ಗಳಿಸಿತ್ತು.ರಾಹುಲ್ 26  ಬಾಲ್ ಗಳಿಗೆ ಮೂರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಜತೆಗೆ 47 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು.ಇನ್ನು ಇವರಿಗೆ ಜತೆಯಾಗಿದ್ದ ಧವನ್ 24 ಬಾಲ್ ಗಳಲ್ಲಿ ಕೇವಲ 14 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು.

ಹತ್ತನೇ ಓವರ್ ಗೆ ಭಾರತದ ಸ್ಕೋರ್ 73/2. ಆಗಿತ್ತು.ಆಗ ಆಗಮಿಸಿದ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಉತ್ತಮ ಮೊತ್ತ ಸೇರಿಸಲು ಯಶಸ್ವಿಯಾದರು. ಇವರಲ್ಲಿ ಕೊಹ್ಲಿ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿ ಮಿಂಚಿದರೆ ಧೋನಿ 50 ಟ್ವೆಂಟಿ-20 ಅಂತಾರಾಷ್ಟ್ರೀಯ ಸಿಕ್ಸರ್‌ ಕ್ಲಬ್ ಸೇರಿದ್ದಾರೆ. ಕೊಹ್ಲಿ 29  ಬಾಲ್ ಗಳಲ್ಲಿ ಅರ್ಧಶತಕ ಸಿಡಿಸಿ 72 ರನ್ ಸೇರಿಸಿ ಅಜೇಯರಾಗಿ ಉಳಿದರು.ಧೋನಿ 40 ರನ್ ಪೇರಿಸಿದ್ದರು. ಹೀಗೆ ಭಾರತ ನಾಲ್ಕು ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿ ಉತ್ತಮ ಆಟ ಪ್ರದರ್ಶಿಸಿದೆ.

About the author

ಕನ್ನಡ ಟುಡೆ

Leave a Comment