ಕ್ರೀಡೆ

ಟೀಂ ಇಂಡಿಯಾ ಐತಿಹಾಸಿಕ ಸಾಧನೆ; ತಂಡದ ಆಟಗಾರರಿಗೆ ಬಿಸಿಸಿಐ ಭರ್ಜರಿ ಗಿಫ್ಟ್

ನವದೆಹಲಿ: ಆಸೀಸ್ ನೆಲದಲ್ಲಿ ಕಾಂಗರೂಗಳನ್ನು ಬಗ್ಗು ಬಡಿಯುವ ಮೂಲಕ 71 ವರ್ಷಗಳ ಬಳಿಕ ಐತಿಹಾಸಿಕ ಸಾಧನೆ ಮಾಡಿರುವ ಟೀಂ ಇಂಡಿಯಾ ಆಟಗಾರರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಭರ್ಜರಿ ಗಿಫ್ಟ್ ನೀಡಿದೆ.
ಬಿಸಿಸಿಐ ವಿರಾಟ್ ಕೊಹ್ಲಿಗೆ ಪಡೆಗೆ ತಲಾ 15 ಲಕ್ಷ ರುಪಾಯಿ ಬಹುಮಾನ ಘೋಷಿಸಿದೆ. ಇನ್ನು ಕಾಯ್ದಿರಿಸಿದ ಆಟಗಾರರಿಗೆ ತಲಾ 7.5 ಲಕ್ಷ ರುಪಾಯಿ ಬಹುಮಾನ ಘೋಷಣೆ ಮಾಡಿದೆ. ಇದೇ ವೇಳೆ ಟೀಂ ಇಂಡಿಯಾ ಕೋಚ್ ಗಳಿಗೂ ತಲಾ 25 ಲಕ್ಷ ರುಪಾಯಿ ಹಾಗೂ ನಾನ್ ಕೋಚಿಂಗ್ ಸಪೋರ್ಟ್ ಸಿಬ್ಬಂದಿಗೆ ಅವರ ಪ್ರೋ ರಾಟಾ ಪಗಾರಕ್ಕೆ ಸಮಾನವಾದ ಬಹುಮಾನವನ್ನು ಬಿಸಿಸಿಐ ಘೋಷಿಸಿದೆ. 71 ವರ್ಷಗಳಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ನೆಲದಲ್ಲಿ 12 ಟೆಸ್ಟ್ ಸರಣಿಗಳನ್ನು ಆಡಿದ್ದು ಆ ಪೈಕಿ ಇದೇ ಮೊದಲ ಬಾರಿಗೆ ಸರಣಿ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.

About the author

ಕನ್ನಡ ಟುಡೆ

Leave a Comment