ಸಿನಿ ಸಮಾಚಾರ

ಟೀಕೆಗಳಿಗೆ ತಕ್ಕ ಉತ್ತರ: ಮತ್ತೆ ಕಟ್ಟು ಮಸ್ತಾದ ದೇಹ ಪ್ರದರ್ಶಿಸಿದ ಕಿಚ್ಚ ಸುದೀಪ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಪೈಲ್ವಾನ್ ಚಿತ್ರಕ್ಕಾಗಿ ಸಖತ್ ವರ್ಕ್ ಔಟ್ ಮಾಡುತ್ತಿದ್ದು ದೇಹವನ್ನು ದಂಡಿಸಿ, ಹುರಿಗೊಳಿಸಿ ಸಿಕ್ಸ್ ಪ್ಯಾಕ್ ಮಾಡಿದ್ದಾರೆ.
ಸುದೀಪ್ ಅವರು ಪೈಲ್ವಾನ್ ಚಿತ್ರದಲ್ಲಿ ಕುಸ್ತಿಪಟುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಹಗಲಿರುಳು ದೇಹವನ್ನು ದಂಡಿಸಿ ಹುರಿಗೊಳಿಸುತ್ತಿದ್ದಾರೆ. ಈ ಹಿಂದೆ ಚಿತ್ರದ ಚಿತ್ರ ತಂಡ ಚಿತ್ರದಲ್ಲಿನ ಸುದೀಪ್ ಅವರ ಅವತಾರವನ್ನು ಬಿಡುಗಡೆ ಮಾಡಿದ್ದರು. ಈ ಫೋಟೋ ನೋಡಿ ಸುದೀಪ್ ಅಭಿಮಾನಿಗಳು ಫಿದಾ ಆಗಿದ್ದರು. ಅಲ್ಲದೆ ಚಿತ್ರದಲ್ಲಿನ ತಮ್ಮ ನೆಚ್ಚಿನ ಹೀರೋ ಕುರಿತು ನಿರೀಕ್ಷೆಗಳು ಹೆಚ್ಚಿಸಿತ್ತು. ಇನ್ನು ಕೆಲವರು ಇದು ಸುದೀಪ್ ಅವರ ನಿಜವಾದ ದೇಹವಲ್ಲ ಎಂದು ಟೀಕಿಸಿದ್ದರು. ಇದೀಗ ಇದಕೆಲ್ಲಾ ಫುಲ್ ಸ್ಟಾಪ್ ಇಡಲು ಸುದೀಪ್ ಮತ್ತೊಮ್ಮೆ ತಮ್ಮ ಉರಿಗೊಳಿಸಿದ ದೇಹವನ್ನು ಪ್ರದರ್ಶಿಸಿದ್ದಾರೆ.
ಪೈಲ್ವಾನ್ ಚಿತ್ರದ ನ್ಯೂ ಲುಕ್ ನಲ್ಲಿ ಅವರ ಈ ಹೊಸ ಅವತಾರ ಬೆರಗು ಮೂಡಿಸಿದೆ. ಇದು ನಿಜವಾಗಿಯೂ ಸುದೀಪ್ ಅವರೇನಾ ಎಂದು ಟೀಕಿಸಿದ್ದ ಅಭಿಮಾನಿಗಳು ಬಾಯಿ ಮೇಲೆ ಬೆರಳಿಟ್ಟುಕೊಂಡು, ಬೆರಗು ಕಣ್ಣುಗಳಿಂದ ನೋಡುತ್ತಿದ್ದಾರೆ. ಚಿತ್ರ ನಿರ್ದೇಶಕ ಕೃಷ್ಣ ಅವರು ಸುದೀಪ್ ಅವರ ಲುಕ್ ಅನ್ನು ರಿಲೀಸ್ ಮಾಡಿದ್ದಾರೆ. ಸುದೀಪ್ ಸ್ವಿಮ್ಮಿಂಗ್ ಪೂಲ್ ನಲ್ಲಿ ಹಿಮ್ಮುಖವಾಗಿ ನಿಂತು ಉಕ್ಕಿನಂತಹ ದೇಹವನ್ನು ಪ್ರದರ್ಶಿಸಿದ್ದಾರೆ.

About the author

ಕನ್ನಡ ಟುಡೆ

Leave a Comment