ಕ್ರೀಡೆ

ಟೆನ್‌ಪಿನ್‌ ಬೌಲಿಂಗ್‌ನಲ್ಲಿ  ಹಮೀದ್‌ಗೆ 8ನೇ ಸ್ಥಾನ

ಬೆಂಗಳೂರು: ಭಾರತದ ಅನುಭವಿ ಬೌಲರ್‌ಗಳಾದ ಶೇಕ್‌ ಅಬ್ದುಲ್‌ ಹಮೀದ್‌ ಮತ್ತು ಶಬ್ಬೀರ್‌ ಧನ್ಕೋಟ್‌, ದುಬೈನಲ್ಲಿ ನಡೆದ 6ನೇ ಡಿಐಬಿಸಿ ಅಂತಾರಾಷ್ಟ್ರೀಯ ಓಪನ್‌ ಟೆನ್‌ಪಿನ್‌ ಬೌಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ 8ನೇ ಮತ್ತು 10ನೇ ಸ್ಥಾನ ಪಡೆದಿದ್ದಾರೆ.

ಮಾಸ್ಟರ್ಸ್‌ ವಿಭಾಗದ 2ನೇ ಸುತ್ತಿನ ಸ್ಪರ್ಧೆಯಲ್ಲಿ ಹಮೀದ್‌ 205.7ರ ಸರಾಸರಿಯಲ್ಲಿ 6 ಗೇಮ್‌ಗಳಿಂದ ಒಟ್ಟಾರೆ 1234 ಅಂಕಗಳನ್ನು ಗಳಿಸಿದರು. ಮತ್ತೊಂದೆಡೆ 2 ಗೇಮ್‌ಗಳಲ್ಲಿ ಕಡಿಮೆ ಅಂಕಗಳಿಸಿದ ಶಬ್ಬೀರ್‌ ಅಂತಿಮವಾಗಿ 203.2ರ ಸರಾಸರಿಯಲ್ಲಿ 1219 ಅಂಕಗಳನ್ನು ಕಲೆಹಾಕಿದರು.

ಫೈನಲ್‌ನಲ್ಲಿ ಸಿಂಗಾಪುರ್‌ನ ಜೊನೊವೊನ್‌ ನಿಯೋ 258-223, 248-201 ಅಂತರದ ಗೇಮ್‌ಗಳಿಂದ ಸ್ವದೇಶಿ ಮಿತ್ರ ಆಟಗಾರ ಮೊಹ್ದ್‌ ಜಾರಿಸ್‌ ಗ್ಹೊ ವಿರುದ್ಧ ಜಯ ದಾಖಲಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.

About the author

ಕನ್ನಡ ಟುಡೆ

Leave a Comment