ಕ್ರೀಡೆ ರಾಷ್ಟ್ರ ಸಿನಿ ಸಮಾಚಾರ

ಟೈಮ್ 100 ಪ್ರಭಾವಿಗಳ ಪಟ್ಟಿಯಲ್ಲಿ ದೀಪಿಕಾ, ಕೊಹ್ಲಿ

ಓಲಾ ಸಹ-ಸಂಸ್ಥಾಪಕ ಭಾವಿಶ್ ಅಗರ್ವಾಲ್, ಬಾಲಿವುಡ್ ಅಭಿನೇತ್ರಿ ದೀಪಿಕಾಪಡುಕೋಣೆ, ಭಾರತ ಕ್ರಿಕೆಟ್ ತಂಡ ನಾಯಕ ವಿರಾಟ್ ಕೊಯ್ಲಿ ಹಾಗೂ ಮೈಕ್ರೋಸಾಫ್ಟ್ ಸಂಸ್ಥೆಯ ಭಾರತೀಯ ಮೂಲದ ಸಿಇಒ ಸತ್ಯನಾದೆಲ್ಲಾ ಅವರು ಟೈಮ್ಸ್ ಮ್ಯಾಗಜಿನ್ನ 2018ನೇ ಸಾಲಿನ ಜಗತ್ತಿನ 100 ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ವಾರ್ಷಿಕ ಗಣ್ಯರ ಪಟ್ಟಿಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಸ್ಥಾನ ಪಡೆದಿದ್ದಾರೆ.ಈ ಬಾರಿಯ ಪಟ್ಟಿಯಲ್ಲಿ ಇಂಗ್ಲೆಂಡ್‌ನ 14 ವರ್ಷದ ನಟಿ ಮಿಲ್ಲಿ ಬಾಬೀ ಬ್ರೌನ್ ಸೇರಿದಂತೆ  40 ವರ್ಷದ 45 ಮಂದಿ ಸ್ಥಾನ ಪಡೆದಿರುವುದು ದಾಖಲೆ ಎಂದು ಟೈಮ್ಸ್ ಮ್ಯಾಗಜಿ ನ್‌ ತಿಳಿಸಿದೆ. ಈ  45ರ ಬಳಗದಲ್ಲಿ ‘ಮಿ ಟೂ’ ಖ್ಯಾತಿಯ ಮಾನವಹಕ್ಕುಗಳ ಹೋರಾಟಗಾರ್ತಿ (ಆಫ್ರಿಕನ್-ಅಮೆರಿಕನ್) ತರನಾಬರ್ಕೆ, ಜೆನ್ನಿಫರ್ ಲೋಪೆಜ್, ಅಮೆರಿಕಾದ ಕ್ಲೊ ಕಿಂ, ಅಂತರಿಕ್ಷ ಯಾನಿ ಪೆಗ್ಗಿ ವಿಟ್ಸ್ಯಾನ್ ಮುಂತಾದ ಪ್ರಮುಖರು ಇದ್ದಾರೆ.

About the author

ಕನ್ನಡ ಟುಡೆ

Leave a Comment