ಆಹಾರ

ಟೊಮೆಟೋ ಎಗ್ ಮಸಾಲಾ

ಬೇಕಾಗುವ ಪದಾರ್ಥಗಳು
 • ಮೊಟ್ಟೆ- ಬೇಯಿಸಿದ್ದು 5
 • ಟೊಮೆಟೋ ಪ್ಯೂರಿ- 1 ಬಟ್ಟಲು
 • ಉಪ್ಪು- ರುಚಿಗೆ ತಕ್ಕಷ್ಟು
 • ಶುಂಠಿ- ಸ್ವಲ್ಪ
 • ಬೆಳ್ಳುಳ್ಳಿ- 5-6 ಎಸಳು
 • ಎಣ್ಣೆ- ಎರಡು ಚಮಚ
 • ಈರುಳ್ಳಿ- ಸಣ್ಣಗೆ ಹೆಚ್ಚಿದ್ದು ಅರ್ಧ ಬಟ್ಟಲು
 • ದನಿಯಾ ಪುಡಿ- ಅರ್ಧ ಚಮಚ
 • ಸ್ಕೀಝ್ವಾನ್ ಸಾಸ್- 2 ಚಮಚ
 • ಕಸೂರಿ ಮೇಥಿ- ಸ್ವಲ್ಪ
ಮಾಡುವ ವಿಧಾನ…

 • ಬೇಯಿಸಿದ್ದ ಮೊಟ್ಟೆಗಳನ್ನು ತೆಗೆದುಕೊಂಡು ಮೊಟ್ಟೆಯ ಬಿಳಿ ಭಾಗದ ಮೇಲ್ಭಾಗದಲ್ಲಿ ಸ್ವಲ್ಪ ಸ್ವಲ್ಪವೇ ಐದು ಕಡೆ ಓಪನ್ ಮಾಡುವಂತೆ ಸಣ್ಣದಾಗಿ ಕತ್ತರಿಸಬೇಕು. (ಮಸಾಲೆ ಒಳಗೆ ಹೋಗುವ ಸಲುವಾಗಿ)
 • ನಂತರ ಮಿಕ್ಸಿ ಜಾರ್’ಗೆ ಟೊಮೆಟೋ ಪ್ಯೂರಿ, ಬೆಳ್ಳುಳ್ಳಿ, ಶುಂಠಿಯನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು.
 • ಒಲೆಯ ಮೇಲೆ ಬಾಣಲೆಯಿಟ್ಟು ಅದಕ್ಕೆ 2 ಚಮಚ ಎಣ್ಣೆ ಹಾಕಿ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ರುಬ್ಬಿಕೊಂಡು ಟೊಮೆಟೋ ಪ್ಯೂರಿಯನ್ನು ಹಾಕಿ 5 ನಿಮಿಷ ಕುದಿಸಬೇಕು.
 • ಬಳಿಕ ಉಪ್ಪು, ದನಿಯಾ ಪುಡಿ 1/3 ಬಟ್ಟಲು ನೀರು ಹಾಕಿ 5-6 ನಿಮಿಷ ಕುದಿಸಿ, ನಂತರ ಕತ್ತರಿಸಿಕೊಂಡ ಮೊಟ್ಟೆಗಳು, ಸ್ಕೀಝ್ವಾನ್ ಸಾಸ್, ಕಸೂರಿ ಮೇಥಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ, ರುಚಿಕರವಾದ ಟೊಮೆಟೋ ಎಗ್ ಮಸಾಲಾ ಸವಿಯಲು ಸಿದ್ಧ.

About the author

ಕನ್ನಡ ಟುಡೆ

Leave a Comment