ರಾಜ್ಯ ಸುದ್ದಿ

ಟೋಪಿ ಹಾಕಿ ದ್ರೋಹ ಬಗೆದ ಅಪ್ಪ-ಮಕ್ಕಳ ಜತೆ ನನಗೇನು ಸಂಬಂಧ: ಮಾಜಿ ಸಿಎಂ ಸಿದ್ದುಗೆ ಟಾಂಗ್ ನೀಡಿದ ಬಿಎಸ್‌ವೈ

ಬಾಗಲಕೋಟ: ಟೋಪಿ ಹಾಕಿ ದ್ರೋಹ ಮಾಡಿದ ಅಪ್ಪ-ಮಕ್ಕಳ ಜತೆ ನನಗೇನು ಸಂಬಂಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕರೆದರೆ ಬಿಎಸ್‌ವೈ ಹೋಗಿ ತೊಡೆ ಮೇಲೆ ಕುಳಿತುಕೊಳ್ಳುತ್ತಾರೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಯಡಿಯೂರಪ್ಪ, ‘ನಾನೇಕೆ ದೇವೇಗೌಡರ ಬಳಿ ಹೋಗಲಿ. ಟೋಪಿ ಹಾಕಿ ಅಧಿಕಾರ ನೀಡದೇ ಎಚ್.ಡಿ. ಕುಮಾರಸ್ವಾಮಿ ದ್ರೋಹ ಬಗೆಗಿದ್ದಾರೆ. ಈ ಜನ್ಮದಲ್ಲಿ ಅಪ್ಪ, ಮಕ್ಕಳ ಸಹವಾಸ ಮಾಡುವುದಿಲ್ಲ’ ಎಂದಿದ್ದಾರೆ. ‘ಶಿವಮೊಗ್ಗದಲ್ಲಿ ಗೆದ್ದರೆ ಸಮ್ಮಿಶ್ರ ಸರಕಾರ ಉಳಿಯುತ್ತದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಆದರೆ, ಶಿವಮೊಗ್ಗದಲ್ಲಿ ಗೆಲುವು ನಮ್ಮದೆೇ. ಅಲ್ಲಿಗೆ ಸರಕಾರ ಉಳಿಯುವ ಮಾತೆಲ್ಲಿ? ಎಂದು ವ್ಯಂಗ್ಯವಾಡಿದರು.

ಶ್ರೀರಾಮುಲು 420 ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಎಸ್‌ವೈ, ‘ವಾಲ್ಮೀಕಿ ಸಮುದಾಯಕ್ಕೆ ಅಪಮಾನ ಮಾಡಿರುವ ಸಂಬಂಧ ಬಳ್ಳಾರಿ ಜನರು ಕಾಂಗ್ರೆಸ್‌ಗೆ ಮತ ನೀಡುವುದಿಲ್ಲ. ಒಂದು ವೇಳೆ ಮತ ಹಾಕಿದರೂ ಅದು ವಾಲ್ಮೀಕಿ ಸಮುದಾಯ ಹಾಗೂ ಶ್ರೀರಾಮುಲು ಅವರಿಗೆ ಮಾಡಿದ ಅಪಮಾನ’ ಎಂದರು.

ಎಚ್‌ಡಿಕೆ, ಎಚ್‌ಡಿಡಿಯಿಂದ ವಾಲ್ಮೀಕಿ ಸಮುದಾಯಕ್ಕೆ ಅಪಮಾನ : ವಾಲ್ಮೀಕಿ ಜಯಂತಿಗೆ ಸಿಎಂ ಕುಮಾರಸ್ವಾಮಿ ಹೋಗದಿರುವುದು ಹಾಗೂ ದೇವೇಗೌಡರು ಪ್ರಶಸ್ತಿ ಪಡೆಯಲು ಹೋಗದಿರುವುದು ಇಡೀ ವಾಲ್ಮೀಕಿ ಸಮುದಾಯಕ್ಕೆ ಮಾಡಿದ ಅಪಮಾನ ಎಂದು ಕಿಡಿಕಾರಿದರು.

About the author

ಕನ್ನಡ ಟುಡೆ

Leave a Comment