ರಾಜ್ಯ ಸುದ್ದಿ

ಡಾ. ಶಿವಕುಮಾರ ಸ್ವಾಮೀಜಿ ಆರೋಗ್ಯದಲ್ಲಿ ಸುಧಾರಣೆ

ತುಮಕೂರು: ಚೆನ್ನೈನ ಡಾ. ರೇಲಾ ಇನ್​ಸ್ಟಿಟ್ಯೂಟ್ ಆಂಡ್ ಮೆಡಿಕಲ್ ಸೆಂಟರ್​ನ ಐಸಿಯುನಲ್ಲಿ ಚೇತರಿಸಿಕೊಳ್ಳುತ್ತಿರುವ ಡಾ. ಶಿವಕುಮಾರ ಸ್ವಾಮೀಜಿ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡಿದ್ದು, ಗುರುವಾರ ಬೆಳಗ್ಗೆ ಶ್ರೀಗಳನ್ನು ವಾರ್ಡ್​ಗೆ ಶಿಫ್ಟ್ ಮಾಡಲಾಗುವುದು.

ತಮ್ಮನ್ನು ನೋಡಲು ಬರುವ ಗಣ್ಯರ ಜತೆ ಶ್ರೀಗಳು ಹೆಚ್ಚು ಮಾತನಾಡುವ ಹಾಗೂ ಅವರಿಗೆ ಸೋಂಕು ತಗುಲುವ ಸಾಧ್ಯತೆ ಇರುವುದರಿಂದ ವಾರ್ಡ್​ಗೆ ಶಿಫ್ಟ್ ಮಾಡುವುದನ್ನು ವೈದ್ಯರು ಮುಂದೂಡಿದ್ದಾರೆ. ಬುಧವಾರವೂ ಇಷ್ಟಲಿಂಗ ಪೂಜೆ ನೆರವೇರಿಸಿಯೇ ಶ್ರೀಗಳು ದ್ರವರೂಪದ ಆಹಾರ ಸೇವಿಸಿದರು. ಕಾರು ತಂದಿದ್ದೀಯಾ? ಶ್ರೀಗಳ ಕಾರಿನ ಚಾಲಕ ಮಹದೇವಸ್ವಾಮಿ ಬುಧವಾರ ಚೆನ್ನೈಗೆ ತೆರಳಿದಾಗ ಅಲ್ಲಿದ್ದ ಕಣ್ಣೂರು ಶ್ರೀಗಳು ಮಹದೇವಸ್ವಾಮಿ ಬಂದಿದ್ದಾನೆ ಎಂದಾಗ, ‘ಕಾರು ತಂದಿದ್ದೀಯಾ? ಎಂದು ಶ್ರೀಗಳು ಎದ್ದು ಕೂರಲು ಮುಂದಾದರು. ತಕ್ಷಣ ಆಸ್ಪತ್ರೆ ಸಿಬ್ಬಂದಿ ವಿಶ್ರಾಂತಿ ತೆಗೆದುಕೊಳ್ಳುವಂತೆ ಕೋರಿದರು.

About the author

ಕನ್ನಡ ಟುಡೆ

Leave a Comment