ಸುದ್ದಿ

ಡಿಕೆಶಿ ಮೊರೆಹೋದ ಶಿವಯೋಗಿ ಸ್ವಾಮಿಗಳ ಗುರು ಗೊತ್ತೇ?

ಡಿಕೆಶಿ ಮೊರೆಹೋಗಿರುವ ನೋಣವಿನಕೆರಿ ಶಿವಯೋಗಿ ಸ್ವಾಮಿಗಳಿಗೆ ಗುರುಗಳು ಇವರೆ!
ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೆ ವಿಶ್ವಕ್ಕೆ ಶಾಂತಿ ಇವರ ಜನಪ್ರಿಯ ಘೋಷಣೆ.
ಕಾಯಕಯೋಗಿ, ತತ್ವಜ್ಞಾನಿ, ತುರ್ತುಪರಿಸ್ಥಿತಿಗೆ ಸೆಡ್ಡುಹೊಡೆದು ನಿಂತಿದ್ದ ಇವರೇ ಶ್ರೀ ಶ್ರೀ ಶ್ರೀ 1008 ಪ್ರಸನ್ನ ರೇಣುಕ ವೀರಗಂಗಾಧರ ಶಿವಾಚಾರ್ಯರು.(ರಂಭಾಪುರಿ ಪೀಠಕ್ಕೆ ಅಧ್ಯಕ್ಷರಾಗಿದ್ದರು).

ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಹತ್ತಿರ ಮುಕ್ತಿಮಂದಿರ ಅನ್ನುವ ಧಾರ್ಮಿಕ ಕ್ಷೇತ್ರದ ನಿರ್ಮಾತೃ ಇವರೆ. ನೇಗಿಲು ಹಿಡಿದು ಉಳಿಮೆ ಮಾಡುವುದು, ಬೇವಿನ ರಸವನ್ನು ಕುಡಿದು ಆದ್ಯಾತ್ಮ ಪ್ರಚಾರ ಮಾಡುತ್ತಿದ್ದರು.
ತುರ್ತುಪರಿಸ್ಥಿತಿಯಲ್ಲಿ ಇಂದಿರಾಗಾಂಧಿಯ ಅನಾಚಾರದ ವಿರುದ್ಧ ಜನಜಾಗೃತಿ ಮೂಡಿಸಿದ್ದರು.
1950-80 ರ ಅವಧಿಯಲ್ಲಿ ಗದಗ, ಧಾರವಾಡ, ಹಾವೇರಿ ಇನ್ನೂ ಹಲವಾರು ಉತ್ತರ, ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ಜೀವಂತ ದೇವರಾಗಿದ್ದರು.

About the author

ಕನ್ನಡ ಟುಡೆ

Leave a Comment