ರಾಜ್ಯ ಸುದ್ದಿ

ಡಿಸಿಪಿ ಅಣ್ಣಾಮಲೈ ವಿರುದ್ಧ ನಟಿ ಜಯಪ್ರದಾ, ನಟ ದರ್ಶನ್ ಕೆಂಡಾಮಂಡಲ

ಬೆಂಗಳೂರು: ಮಂಡ್ಯದ ಗಂಡು ಅಂಬರೀಶ್ ಅಂತ್ಯ ಸಂಸ್ಕಾರದ ವೇಳೆ ನಟಿ, ಮಾಜಿ ಸಂಸದೆ ಜಯಪ್ರದಾ ಅವರು ಡಿಸಿಪಿ ಅಣ್ಣಾಮಲೈ ಕೆಂಡಾಮಂಡಲರಾಗಿದ್ದು ಚಾಲೆಂಜಿಕ್ ಸ್ಟಾರ್ ದರ್ಶನ್ ಸಹ ತಮ್ಮ ಆಕ್ರೋಶವನ್ನು ಹೊರಹಾಕಿದ್ದ ಪ್ರಸಂಗ ನಡೆದಿದೆ.
ಅಂಬರೀಶ್ ವಿಧಿವಶರಾದ ಕ್ಷಣದಿಂದ ಅವರ ಅಂತ್ಯಕ್ರಿಯೆವರೆಗೂ ಸರ್ಕಾರ ಅಚ್ಚುಕಟ್ಟಾಗಿ ಪರಿಸ್ಥಿತಿ ನಿಭಾಯಿಸಿತು. ಆದರೆ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ ವೇಳೆ ಸುಮಾರು 15 ಸಾವಿರದಷ್ಟು ಅಭಿಮಾನಿಗಳು ನೆರೆದಿದ್ದರು. ಇದರಿಂದಾಗಿ ಸ್ಥಳದಲ್ಲಿ ಒಂದಷ್ಟು ಗದ್ದಲ, ಗೊಂದಲ ಶುರುವಾಗಿತ್ತು. ಸಾವಿರಾರು ಜನರು ಒಮ್ಮೆಲೇ ಜಾಗ ಖಾಲಿ ಮಾಡುವಾಗ ನೂಕು ನುಗ್ಗಲು ಇರುವುದು ಸಹಜ. ಈ ವೇಳೆ ಜಯಪ್ರದಾ ಅವರು ತಮ್ಮ ಕಾರಿನಿಂದ ಹೊರಬಂದಿದ್ದಾರೆ. ಆಗ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಅವರು ಜಯಪ್ರದಾಗೆ ಕಾರಿನಲ್ಲೇ ಕೂರುವಂತೆ ಕೇಳಿಕೊಂಡಿದ್ದಾರೆ. ಇದರಿಂದ ಕೋಪಗೊಂಡ ಜಯಪ್ರದಾ, ಮಾಜಿ ಸಂಸದೆಯಾಗಿರುವ ತನ್ನತ್ತ ಒಬ್ಬ ಡಿಸಿಪಿ ಕೈ ಮಾಡಿ ತಿಳಿಸುವುದು ಎಷ್ಟು ಸರಿ ಎಂದು ವ್ಯಗ್ರಗೊಂಡಿದ್ದಾರೆ. ನಂತರ ಅಣ್ಣಾಮಲೈ ಮೇಲೆ ಜಯಪ್ರದಾ ಕೂಗಾಡಿದ್ದರು. ಇದೇ ವೇಳೆ ನಟ ದರ್ಶನ್ ಸಹ ಪೊಲೀಸರ ಮೇಲೆ ಕೋಪಗೊಂಡ ಘಟನೆಯೂ ನಡೆಯಿತು. ಪೊಲೀಸರು ಸರಿಯಾಗಿ ಟ್ರಾಫಿಕ್ ನಿಭಾಯಿಸುತ್ತಿಲ್ಲ, ವಾಹನ ಸಂಚಾರಕ್ಕೆ ಸರಿಯಾಗಿ ದಾರಿ ಮಾಡಿಕೊಡುತ್ತಿಲ್ಲ ಎಂದು ಕೂಗಾಡಿದರು.
ಇನ್ನು ಅಂಬರೀಶ್ ಅವರ ದರ್ಶನ ಮಾಡಿ ಅಂತಿಮ ನಮನ ಸಲ್ಲಿಸಲು ಕೆಲ ನಟರಿಗೆ ಅವಕಾಶ ಸಿಗಲಿಲ್ಲ. ಇದರಿಂದ ಕೋಪಗೊಂಡ ಗೋಲ್ಡನ್ ಸ್ಟಾರ್ ಗಣೇಶ್, ಜೈ ಜಗದೀಶ್, ರಂಗಾಯಣ ರಘು, ರವಿಶಂಕರ್ ಅವರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಘಟನೆಯೂ ನಡೆಯಿತು.

About the author

ಕನ್ನಡ ಟುಡೆ

Leave a Comment