ರಾಷ್ಟ್ರ ಸುದ್ದಿ

ಡಿ.12ರಂದು ಇಶಾ ಅಂಬಾನಿ-ಆನಂದ್‌ ಮದುವೆ

ಹೊಸದಿಲ್ಲಿ: ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಕೇಶ್‌ ಅಂಬಾನಿ ಪುತ್ರಿ ಇಶಾ ಅಂಬಾನಿ ಹಾಗೂ ಉದ್ಯಮಿ ಅಜಯ್‌ ಪಿರಮಲ್‌ ಪುತ್ರ ಆನಂದ್‌ ಪಿರಮಲ್‌ ಅವರ ವಿವಾಹ ಡಿ.12ರಂದು ನಡೆಯಲಿದೆ. ಮುಂಬಯಿನಲ್ಲಿ ಅಂಬಾನಿಯವರ ನಿವಾಸದಲ್ಲಿ ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಯ ಪ್ರಕಾರ ಮದುವೆ ನಡೆಯಲಿದೆ. ಅಂಬಾನಿ ಹಾಗೂ ಪಿರಮಲ್‌ ಕುಟುಂಬವು ಜಂಟಿಯಾಗಿ ಈ ಬಗ್ಗೆ ಹೇಳಿಕೆ ನೀಡಿದೆ. ಮುಕೇಶ್‌ ಅಂಬಾನಿ ಮತ್ತು ನೀತಾ ಅಂಬಾನಿ ಅವರು ಮುಂಬಯಿನ ಸಿದ್ದಿ ವಿನಾಯಕ ದೇವಾಲಯಕ್ಕೆ ಭೇಟಿ ನೀಡಿ ವಿವಾಹದ ಆಮಂತ್ರಣ ಪತ್ರಿಕೆಯನ್ನು ಸಿದ್ಧಿವಿನಾಯಕನಿಗೆ ಸಲ್ಲಿಸಿದರು.

About the author

ಕನ್ನಡ ಟುಡೆ

Leave a Comment