ರಾಜಕೀಯ ರಾಷ್ಟ್ರ

ಡ್ಯೂಬ್ಲೀಕೇಟ್ ಕೀಯಿಂದ ತೆರೆದ ಮಹಾದೇವ ಪ್ರಸಾದ್ ಕೋಣೆ

ಸಹಕಾರ ಸಾರಿಗೆ ಸಂಸ್ಥೇಯ ಬೆಳ್ಳಿಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ನಿನ್ನೆ ರಾತ್ರಿ
ಆಗಮಿಸಿದ್ದ ಸಚಿವ ಹೆಚ್ ಎಸ್ ಮಹದೇವ್ ಪ್ರಸಾದ್ ಚಿಕ್ಕಮಗಳೂರಿನ ಕೊಪ್ಪದ ಸೆರಾಯ್ ರೆಸಾರ್ಟ್ ನಲ್ಲಿ ತಂಗಿದ್ದರು. ರಾತ್ರಿ ಅವರು ಮಲಗಿದ್ದ ಕೋಣೆಯಲ್ಲಿ ತೀವ್ರ ಹೃದಯಾಘಾತ ಉಂಟಾಗಿದ್ದು, ಸಚಿವರ ಜೊತೆಯಲ್ಲಿ ಯಾರೊಬ್ಬರು ಇಲ್ಲದ ಕಾರಣ ತುರ್ತು ಚಿಕಿತ್ಸೆ ನೀಡಲು ವಿಳಂಬವಾಗಿದೆ. ಮದ್ಯ ರಾತ್ರಿ ೨ಗಂಟೆ ಸುಮಾರು  ಅಧಿಕಾರಿಗಳು ಸಚಿವರ ಕೋಣೆ ತಟ್ಟಿದ್ದಾರೆ ಆದರೆ ಬಾಗಿಲು ತೆಗೆಯದ ಕಾರಣ ಡ್ಯೂಬ್ಲಿಕೇಟ್ ಕೀ ಬಳಸಿ ಬಾಗಿಲು ತೆಗೆಯಲಾಗಿದೆ. ಆದರೆ ಅಷ್ಟೊತ್ತಿಗಾಗಲೆ ಮಹಾದೇವ ಪ್ರಸಾದ್ ಅವರು ವಿಧಿವಷರಾಗಿದ್ದರು ಎಂದು ಮಾಹಿತಿ ತಿಳಿದಿದೆ.

About the author

ಕನ್ನಡ ಟುಡೆ

Leave a Comment