ರಾಜ್ಯ ಸುದ್ದಿ

ಡ್ರಗ್‌ ಮಾಫಿಯಾಗೆ ನಿಯಂತ್ರಣ: ಎಂ.ಬಿ. ಪಾಟೀಲ್‌ ಸೂಚನೆ

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಡ್ರಗ್‌ ಮಾಫಿಯಾ ನಿಯಂತ್ರಣ ಹಾಗೂ ಅಕ್ರಮ ವಲಸಿಗರ ಮೇಲೆ ನಿಗಾ ವಹಿಸುವಂತೆ ನೂತನ ಗೃಹ ಸಚಿವ ಎಂ.ಬಿ. ಪಾಟೀಲ್‌ ಸೂಚನೆ ನೀಡಿದ್ದಾರೆ.

ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಬುಧವಾರ ಹಿರಿಯ ಪೊಲೀಸ್‌ ಅಧಿಕಾರಿಗಳ ಜತೆ ಸಭೆ ನಡೆಸಿದರು. ಇತ್ತೀಚಿನ ದಿನಗಳಲ್ಲಿ ಡ್ರಗ್‌ ಮಾಫಿಯಾ ಎಲ್ಲೆಡೆ ಹಬ್ಬಿದ್ದು ಇದಕ್ಕೆ ಯುವ ಸಮೂಹ ಬಲಿಯಾಗುತ್ತಿದೆ. ಇದು ಅಪಾಯಕಾರಿ ವಿಚಾರವಾಗಿದೆ. ಬಾಂಗ್ಲಾ ಸೇರಿ ಅಕ್ರಮ ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಪ್ರಕರಣಗಳು ವರದಿಯಾಗುತ್ತಿವೆ. ಇದೆಲ್ಲರ ಬಗ್ಗೆ ಪೊಲೀಸ್‌ ಇಲಾಖೆ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದರು

 

About the author

ಕನ್ನಡ ಟುಡೆ

Leave a Comment