ಕವಿತೆಗಳು

ತನುವಿನ ಹೊಸ ಆಸೆ

ಹದಿನಾರರ ವಯಸ್ಸು
ನೀ ಕದ್ದೆ ನನ್ನ ಮನಸ್ಸು
ಅರಳಿತು ಹೊಸ ಕನಸು

ಆಗು ಹೋಗುಗಳ ಮರೆತೆ
ನಿನ್ನ ಜೊತೆ ನಾ ಬೆರೆತೆ
ನನಗಾಗೇ ನೀನೆಂದು ಅರಿತೆ

ಮನ ಹಕ್ಕಿಯಾಗಿ ಹಾರಾಡಿತು
ಮೊಗ್ಗಾದ ಹೂ ಅರಳಿತು
ತನುವಲ್ಲಿ ಹೊಸ ಆಸೆ ಕೆರಳಿತು

ಹೊಲಿದೆ ಸುಳ್ಳುಗಳ ಸರಮಾಲೆ
ತೊಡಿಸಿದೆ ನಿನಗೆ ಒರಮಾಲೆ
ಆಡಿದೆವು ಕೂಡಿ ರಾಸಲೀಲೆ

ಹಗಲು ಇರುಳು ಕಲೆತೆವು
ಒಂದಾಗಿ ನಾವು ಬೆರೆತೆವು
ಒಬ್ಬರನ್ನೊಬ್ಬರು ಅರಿತೆವು

ಸುಂದರ ನಮ್ಮ ಜೋಡಿ
ಬೆರಗಾದರು ನಮ್ಮ ನೋಡಿ
ಬಿಟ್ಟೆವು ಅಲ್ಲಿಂದ ಗಾಡಿ

ಸುರಭಿ ಲತಾ

About the author

ಕನ್ನಡ ಟುಡೆ

Leave a Comment