ಸಿನಿ ಸಮಾಚಾರ

ತನುಶ್ರೀ ದತ್ತಾ ಪ್ರಕರಣ: ನಾನು ಆಗಿನ್ನು ಸಣ್ಣವನಾಗಿದ್ದೆ ಎಂದ ಹಿರಿಯ ನಟ ಶಕ್ತಿ ಕಪೂರ್‌!

ನವದೆಹಲಿ: ಬಾಲಿವುಡ್‌ ನಟಿ ತನುಶ್ರೀ ದತ್ತಾ ಅವರು ಹಿರಿಯ ನಟ ಹಾಗೂ ನಿರ್ಮಾಪಕ ನಾನಾ ಪಾಟೇಕರ್ ವಿರುದ್ಧ ಹೊರಿಸಿರುವ ಲೈಂಗಿಕ ಕಿರುಕುಳದ ಆರೋಪ ಬಾಲಿವುಡ್‌ನಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದ್ದು, ವಿವಾದದ ಬಗ್ಗೆ ನಟ ಅಮಿತಾಬ್ ಬಚ್ಚನ್ ನಂತರ ಹಿಂದಿ ಚಿತ್ರರಂಗದ ಮತ್ತೊಬ್ಬ ದೊಡ್ಡ ನಟ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತಂತೆ ಪ್ರತಿಕ್ರಿಯಿಸಿರುವ ನಟ ಶಕ್ತಿ ಕಪೂರ್, ತನುಶ್ರೀ ದತ್ತಾ ಮಾಡಿರುವ ಆರೋಪದ ಕುರಿತಂತೆ ಪ್ರತಿಕ್ರಿಯಿಸುವಂತೆ ಕೇಳಿದ ಪ್ರಶ್ನೆಗೆ ನಗುತ್ತಲೇ ಉತ್ತರ ನೀಡಿದ್ದಾರೆ. ಈ ಘಟನೆ ನಡೆದಿರುವುದು ಕಳೆದ 10 ವರ್ಷಗಳ ಹಿಂದೆ. ಆ ಸಮಯದಲ್ಲಿ ನಾನಿನ್ನು ಮಗುವಾಗಿದ್ದೆ ಎಂದು ವ್ಯಂಗ್ಯವಾಡಿದ್ದಾರೆ.

ನಾನು ನಿನ್ನೆಯಷ್ಟೇ ಅಮೆರಿಕದಿಂದ ಹಿಂದಿರುಗಿದ್ದೇನೆ. ಅಲ್ಲಿ ಗಣಪತಿ ಪೂಜೆಯಲ್ಲಿ ತೊಡಗಿಕೊಂಡಿದ್ದೆ. ಹಾಗಾಗಿ ಘಟನೆ ಬಗ್ಗೆ ನನಗೇನು ತಿಳಿದಿಲ್ಲ. ಘಟನೆ ನಡೆದಾಗಿ ನಾನು ಚಿಕ್ಕವನಾಗಿದ್ದೆ ಎಂದು ಉತ್ತರಿಸಿದ್ದಾರೆ. ಈ ಹಿಂದೆ ಇದೇ ವಿವಾದ ಕುರಿತಂತೆ ಪ್ರತಿಕ್ರಿಯಿಸಿದ್ದ ಬಾಲಿವುಡ್‌ ನ ಹಿರಿಯ ನಟ ಅಮಿತಾಬ್ ಬಚ್ಚನ್, ನನ್ನ ಹೆಸರು ತನುಶ್ರೀ ಅಲ್ಲ, ನಾನಾ ಪಾಟೇಕರ್ ಕೂಡ ಅಲ್ಲ. ಈ ಪ್ರಶ್ನೆಗೆ ನಾನು ಹೇಗೆ ಉತ್ತರಿಸಲಿ ಎಂದು ಹೇಳಿದ್ದರು. ಹತ್ತು ವರ್ಷಗಳ ಹಿಂದೆ 2008ರಲ್ಲಿ ಬಾಲಿವುಡ್​ನ ‘ಹಾರ್ನ್​ ಓಕೆ ಪ್ಲೀಸ್​’ ಚಿತ್ರದ ಚಿತ್ರೀಕರಣ ವೇಳೆ ನಾನಾ ಪಾಟೇಕರ್​ ಹಾಗೂ ನೃತ್ಯ ನಿರ್ದೇಶಕ ಗಣೇಶ್​ ಆಚಾರ್ಯ ಅವರು ನನ್ನ ಮೇಲೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿ ತನುಶ್ರೀ ಅವರು ಮಾಧ್ಯಮ ಸಂದರ್ಶನದಲ್ಲಿ ಕಳೆದ ತಿಂಗಳು ಆರೋಪ ಮಾಡಿದ್ದರು.

About the author

ಕನ್ನಡ ಟುಡೆ

Leave a Comment