ಕ್ರೈಂ ದೇಶ ವಿದೇಶ

ತಪಾಸಣೆ ವೇಳೆ ಸಿಕ್ಕಿಬಿದ್ದ ಟಾಪ್ ಮಹಿಳಾ ಕ್ರಿಕೆಟರ್

ಬಾಂಗ್ಲಾದೇಶದ ಟಾಪ್‌‌ ಮಹಿಳಾ ಕ್ರಿಕೆಟರ್‌‌ ನಜ್ರೀನ್ ಖಾನ್ ಮುಕ್ತಾ 14 ಸಾವಿರ ಮೆಥಾಂಫಿಟಾಮೈನ್ (Methamphetamine Pills) ಸಾಗಾಣಿಕೆ ಆರೋಪದಡಿ ಬಂಧಿತರಾಗಿದ್ದಾರೆ. ಅವರಿಗೆ ಕಠಿಣ ಜೈಲು ಶಿಕ್ಷೆ ಆಗುವ ಸಾಧ್ಯತೆ ಇದೆ.ನಜ್ರೀನ್‌‌ ಖಾನ್‌‌ ಢಾಕಾ ಪ್ರೀಮಿಯರ್‌‌‌ ಲೀಗ್‌‌ ಟೂರ್ನಿಯಲ್ಲಿ ಭಾಗಿಯಾಗಿ ಮರಳಿ ಬರುತ್ತಿದ್ದ ವೇಳೆ ಪೊಲೀಸರು ತಪಾಸಣೆ ನಡೆಸಿದ್ದ ವೇಳೆ ರೆಡ್‌‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ. ತಪಾಸಣೆ ವೇಳೆ ಕ್ರಿಕೆಟರ್‌‌ ಬ್ಯಾಗ್‌‌ನಲ್ಲಿ ಬರೋಬ್ಬರಿ 14 ಸಾವಿರ ಮಾತ್ರೆ ಇದ್ದಿದ್ದಾಗಿ ಸ್ಥಳೀಯ ಪೊಲೀಸ್‌‌ ಅಧಿಕಾರಿ ಚೌಧರಿ ತಿಳಿಸಿದ್ದಾರೆ. ಇದೊಂದು ಅಪರಾಧವಾಗಿದ್ದು, ಮಾದಕವಸ್ತು ಕಳ್ಳಸಾಗಣಿಕೆ ಆರೋಪದಡಿ ಕ್ರಿಕೆಟರ್‌ಗೆ ಗರಿಷ್ಠ ಶಿಕ್ಷೆ ಆಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

About the author

ಕನ್ನಡ ಟುಡೆ

Leave a Comment