ರಾಜ್ಯ ಸುದ್ದಿ

ತಲವಾರ್‌ನಿಂದ ಕೇಕ್‌ ಕತ್ತರಿಸಿದ ಜನ್ಮ ದಿನ ಆಚರಿಸಿಕೊಂಡ ಜೆಡಿಎಸ್ ಮುಖಂಡ ಅರೆಸ್ಟ್

ಕೊಪ್ಪಳ: ತಲ್ವಾರ್ ನಿಂದ ಕೇಕ್  ಕತ್ತರಿಸಿ ಜನ್ಮ ದಿನ ಆಚರಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಮುಖಂಡನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಕೊಪ್ಪಳದ ಮಹೆಮೂದ್ ಹುಸೇನ್ ಬಲ್ಲೆ ಬಂಧಿತ. ಈತನು ಎರಡು ದಿನದ ಹಿಂದೆ ತನ್ನ ಜನ್ಮ ದಿನಾಚರಣೆ ವೇಳೆ ತಲ್ವಾರ್ ನಿಂದ ಕೇಕ್ ಕತ್ತರಿಸಿದ್ದ. ಈ ಸನ್ನಿವೇಶ ಮೊಬೈಲ್ ನಲ್ಲಿ ಚಿತ್ರೀಕರಿಸಿ ಫೆಸ್ ಬುಕ್ ಖಾತೆಯಲ್ಲಿ ಹಾಕಿದ್ದ. ವಿಡಿಯೋ ವೈರಲ್ ಆಗಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಡಿಲಿಟ್ ಮಾಡಿದ್ದ. ತಲವಾರ್‌ನಿಂದ ಕೇಕ್‌ ಕತ್ತರಿಸಿದ ಜೆಡಿಎಸ್ ಮುಖಂಡ ನಗರ ಠಾಣೆ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ರೌಡಿ ಶೀಟರ್ ಆಗಿರುವ ಮೆಹಮೂದ್ ಹುಸೇನ್, ತಲವಾರ್ನಿಂದ ಕೇಕ್ ಕತ್ತರಿಸುವ ವೀಡಿಯೋವನ್ನು ಫೇಸ್‌ಬುಕ್‌‌ಗೆ ಹಾಕಿಕೊಂಡಿದ್ದು, ನಂತರ ವೀಡಿಯೋ ಡಿಲೀಟ್ ಮಾಡಿದ್ದಾನೆ.

About the author

ಕನ್ನಡ ಟುಡೆ

Leave a Comment