ರಾಷ್ಟ್ರ ಸುದ್ದಿ

ತಲೆಮಾರುಗಳಿಂದ ಭಾರತಾಂಬೆಯ ಸೇವೆಯಲ್ಲಿ ಅಭಿನಂದನ್ ವರ್ತಮಾನ್ ಕುಟುಂಬ

ಚೆನ್ನೈ: 2017ರಲ್ಲಿ ತಮಿಳಿನಲ್ಲಿ ಮಣಿ ರತ್ನಂ ನಿರ್ದೇಶನದ ಕಾಟ್ರು ವೆಲಿಯಿದೈ ಸಿನಿಮಾ ಬಂದಿತ್ತು, ಅದರಲ್ಲಿ ನಾಯಕ ಕಾರ್ತಿ ಭಾರತೀಯ ವಾಯುಪಡೆಯ ಅಧಿಕಾರಿಯಾಗಿರುತ್ತಾರೆ, ಅವರ ಯುದ್ಧ ವಿಮಾನದ ಮೇಲೆ ಗುಂಡಿಟ್ಟು ಅದು ಪಾಕಿಸ್ತಾನದಲ್ಲಿ ಹೋಗಿ ಬೀಳುತ್ತದೆ.
ನಂತರ ಚಿತ್ರದ ನಾಯಕ ತನ್ನ ಕುಟುಂಬದವರ ಜೊತೆ ಒಗ್ಗೂಡುತ್ತಾನೆ, ಈ ಚಿತ್ರದಲ್ಲಿ ಸದ್ಯ ಪಾಕ್ ಬಂಧನದಲ್ಲಿರುವ ಭಾರತ ಪೈಲಟ್ ಅಭಿನಂದನ್ ವರ್ತಮಾನ್ ತಂದೆ ವರ್ತಮಾನ್ ಸಲಹೆಗಾರರಾಗಿದ್ದರು. ಕಾಕತಾಳೀಯವೆಂಬಂತೆ ವರ್ತಮಾನ್ ಅವರ ಪುತ್ರ ಯುದ್ಧ ವಿಮಾನ ಪೈಲಟ್ ಅಭಿನಂದನ್ ಸದ್ಯ ಪಾಕ್ ವಶದಲ್ಲಿದ್ದು ಇಂದು ಬಿಡುಗಡೆಯಾಗುತ್ತಿದ್ದಾರೆ. ಎರಡು ದಿನಗಳ ಹಿಂಗೆ ಪಾಕಿಸ್ತಾನ ಜೊತೆಗೆ ನಡೆದ ವಾಯುದಾಳಿಯಲ್ಲಿ ಪಾಕಿಸ್ತಾನ ವಾಯುಪಡೆಯಿಂದ ಬಂಧಿತರಾಗಿ ಶುಕ್ರವಾರ ಬಿಡುಗಡೆಯಾಗುತ್ತಿರುವ ಮಿಗ್ 21 ಯುದ್ಧ ವಿಮಾನದ ಭಾರತೀಯ ಪೈಲಟ್ ಅಭಿನಂದನ್ ವರ್ತಮಾನ್ ಅವರ ಕುಟುಂಬಸ್ಥರು ತಮ್ಮ ಸೇವೆಯನ್ನು ಭಾರತೀಯ ಸೇನೆಗೆ ಮುಡಿಪಾಗಿಟ್ಟವರು.
ಎರಡನೇ ಮಹಾಯುದ್ಧದ ಕಾಲದಿಂದಲೇ ಅಭಿನಂದನ್ ಪೂರ್ವಜರು ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಿಕೊಂಡು ಬಂದಿದೆ. ಅಭಿನಂದನ್ ಅವರ ನಿವಾಸ ಚೆನ್ನೈ ಉಪನಗರದಲ್ಲಿದ್ದು ಅಲ್ಲಿಗೆ ವಿವಿಧ ರಾಜಕೀಯ ಮುಖಂಡರು, ಗಣ್ಯರು ಹೋಗಿ ಶುಭಾಶಯ ತಿಳಿಸಿಬಂದಿದ್ದರು. ಅಲ್ಲಿಗೆ ಭೇಟಿ ನೀಡಿದ್ದ ತಮಿಳು ನಾಡು ಮೀನುಗಾರಿಕೆ ಸಚಿವ ಡಿ ಜಯಕುಮಾರ್, ಅಭಿನಂದನ್ ತಂದೆ ವರ್ತಮಾನ್ ಕಾರ್ಗಿಲ್ ಯುದ್ಧದ ಸಮಯದಲ್ಲಿ ಸೇವೆ ಸಲ್ಲಿಸಿದ್ದರು. ಎರಡನೇ ಮಹಾಯುದ್ಧ ಸಮಯದಲ್ಲಿ ಭಾರತೀಯ ವಾಯುಪಡೆಯಲ್ಲಿ ಅಭಿನಂದನ್ ತಾತ ಸಿಂಹಕುಟ್ಟಿ ಸೇವೆ ಸಲ್ಲಿಸಿದ್ದರು.
ಕಳೆದೆರಡು ದಿನಗಳಿಂದ ಅಭಿನಂದನ್ ಕುರಿತು ಭಾರತೀಯರ ಬಾಯಿಯಲ್ಲಿ ನಲಿದಾಡುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಟ್ವಿಟ್ಟರ್ ನಲ್ಲಿ ಅಭಿನಂದನ್ ಹ್ಯಾಶ್ ಟಾಗ್ ನಲ್ಲಿ ಅಭಿನಂದನೆ, ಶುಭ ಹಾರೈಕೆಗಳು ಕೇಳಿಬರುತ್ತಿವೆ. ವರ್ತಮಾನ್ ಭಾರತೀಯ ವಾಯುಪಡೆಯ ಪೂರ್ವ ಏರ್ ಕಮಾಂಡ್ ನ ಕಮಾಂಡಿಂಗ್ ಇನ್ ಚೀಫ್ ಆಗಿ ಅಧಿಕಾರ ವಹಿಸಿಕೊಂಡ ನಂತರ 40 ವಿವಿಧ ರೀತಿಯ ಯುದ್ಧ ವಿಮಾನಗಳಲ್ಲಿ ಸೇವೆ ಸಲ್ಲಿಸಿದ್ದರು. ಕಾರ್ಗಿಲ್ ಯುದ್ಧ ಸಮಯದಲ್ಲಿ ಗ್ವಾಲಿಯರ್ ನಲ್ಲಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿದ್ದರು. 2001ರ ಡಿಸೆಂಬರ್ 13ರಂದು ಸಂಸತ್ತು ಮೇಲೆ ಉಗ್ರರ ದಾಳಿ ನಂತರ ನಡೆದ ಆಪರೇಷನ್ ಪರಾಕ್ರಮ್ ನಲ್ಲಿ ವರ್ತಮಾನ್ ಅವರು ಪಶ್ಚಿಮ ವಲಯದ ವಾಯುನೆಲೆಯ ಕಮಾಂಡರ್ ಆಗಿದ್ದರು.

About the author

ಕನ್ನಡ ಟುಡೆ

Leave a Comment