ದೇಶ ವಿದೇಶ

ತವರು ದೇಶ ಪಾಕಿಸ್ತಾನಕ್ಕೆ ಆಗಮಿಸಿದ ಮಲಾಲಾ ಯೂಸಫ್ ಝಾಯಿ

ಇಸ್ಲಾಮಾಬಾದ್  :  ತಾಲಿಬಾನ್ ಉಗ್ರರ ದಾಳಿಯಿಂದ ತಲೆಗೆ ತೀವ್ರ ಗಾಯವಾಗಿ ಲಂಡನ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ  ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸಫ್  ಝಾಯಿ ಐದು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಪಾಕಿಸ್ತಾನದ  ತವರು ಜಿಲ್ಲೆ ಸ್ವಾತ್ ಕಣಿವೆಗೆ ಭೇಟಿ ನೀಡಿದ್ದಾರೆ.

ಬಿಗಿ ಭದ್ರತೆ ನಡುವೆ ತಮ್ಮ ಪೋಷಕರೊಂದಿಗೆ ಸ್ವಾತ್ ಜಿಲ್ಲೆಯ ಖೈಬರ್ ಪಕ್ತುಂಕ್ವಾ ಪ್ರದೇಶಕ್ಕೆ ಒಂದು ದಿನಗಳ ಭೇಟಿ ನೀಡಿದ್ದು ಸೆರ್ಕ್ಯೂರಿಟಿ  ಹೌಸ್ ನಲ್ಲಿ ವಾಸ್ತವ್ಯಕ್ಕೆ ವ್ಯವಸ್ತೆ ಮಾಡಲಾಗಿದೆ.ಸೆರ್ಕ್ಯೂರಿಟಿ  ಹೌಸ್ ಸುತ್ತಮುತ್ತ  ಪೊಲೀಸರನ್ನು ನಿಯೋಜಿಸಲಾಗಿದೆ.

ಆಕೆಯ ಪೂರ್ವಿಕರು ನೆಲೆಸಿದ್ದ ಮಿಂಗೊರಾದ ಮಾಕನ್ ಬೇಗ್ ಗೂ ಭೇಟಿ ನೀಡಲಿದ್ದು ಸಾಂಗ್ಲಾ ಜಿಲ್ಲೆಯಲ್ಲಿ ಬಾಲಕಿಯರ ಶಾಲೆಯನ್ನು ಮಲಾಲಾ ಉದ್ಘಾಟಿಸಲಿದ್ದಾರೆ. ಪಾಕಿಸ್ತಾನ ತನ್ನ ದೇಶವಾಗಿದ್ದು ಇತರರು ಹೊಂದಿರುವ ಎಲ್ಲಾ ಹಕ್ಕುಗಳನ್ನು ನಾನು ಹೊಂದಿದ್ದೇನೆ.

ಇಲ್ಲಿನ ಬಡ ಬಾಲಕಿಯರು ಉನ್ನತ  ಶಿಕ್ಷಣ ಪಡೆಯಬೇಕೆಂಬುದು ನನ್ನ ಕನಸಾಗಿದೆ ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದಾಗಿ ಹೇಳಿದ್ದಾರೆ. ಆಕೆಯ ಸಾಧನೆ ಪರಿಗಣಿಸಿ 17 ನೇ ವಯಸ್ಸಿನಲ್ಲಿಯೇ ಜಗತ್ತಿನ ಅತ್ಯುನ್ನತ ಪ್ರಶಸ್ತಿಯಾದ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಮಲಾಲಾ ಭಾಜನರಾಗಿದ್ದರು.

 

 

 

About the author

ಕನ್ನಡ ಟುಡೆ

Leave a Comment