ಸುದ್ದಿ

ತಾಯಂದಿರು ಜೀನ್ಸ್‌ ಧರಿಸಿದರೆ ಮಕ್ಕಳು ನಪುಂಸಕರಾಗುತ್ತಾರೆ!

ತಿರುವನಂತಪುರಂ: ‘ಮಹಿಳೆಯರು ಜೀನ್ಸ್‌ ಧರಿಸುತ್ತಿರುವುದರಿಂದಾಗಿ ಅವರಿಗೆ ಹುಟ್ಟುವ ಮಕ್ಕಳು ನಪುಂಸಕರಾಗಿ ಹುಟ್ಟುತ್ತಿದ್ದಾರೆ’ ಎಂದು ಸ್ವಯಂ ಘೋಷಿತ ವಿದ್ಯಾರ್ಥಿ ಸಲಹೆಗಾರನೊಬ್ಬ ಹುಸಿ ವೈಜ್ಞಾನಿಕ ಮತ್ತು ಕಾಮಪ್ರಚೋದಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.

ಕಾಲಡಿಯ ಸರ್ಕಾರಿ ಕಾಲೇಜ್‌ವೊಂದರಲ್ಲಿ  ಪ್ರಾಧ್ಯಾಪಕರಾಗಿರುವ ರಜಿತ್‌ ಕುಮಾರ್‌ ಈ ಹೇಳಿಕೆ ನೀಡಿದ್ದು ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗಿದೆ. ‘ಹೇಳಿಕೆ ಸ್ತ್ರೀವಿರೋಧಿ  ಮತ್ತು ಲಿಂಗ ಸೂಕ್ಷ್ಮವಲ್ಲದ್ದಾಗಿದೆ’ ಎಂದು ಶಿಕ್ಷಣ ಸಚಿವೆ ಎಸ್‌.ಎಸ್‌.ಶೈಲಜಾ ಹೇಳಿದ್ದಾರೆ.

ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ರಜಿತ್‌ ಪೋಷಕರ ವಿರುದ್ಧ ವರ್ತನೆಯಿಂದಾಗಿ ಮಕ್ಕಳು ಸ್ವಲೀನತೆಗೆ ಗುರಿಯಾಗುತ್ತಿದ್ದಾರೆ. ಮಹಿಳೆ ತನ್ನ ಹೆಣ್ತನವನ್ನು ಮರೆತರೆ ಅಥವ ಕಡೆಗಣಿಸಿದರೆ, ಪುರುಷ ಪುರುಷತ್ವವನ್ನು ಮರೆತರೆ ಅವರಿಗೆ ಹುಟ್ಟುವ ಹೆಣ್ಣು ಮಗು ಗಂಡಿನ ಗುಣಲಕ್ಷಣ ಹೊಂದಿರುತ್ತದೆ ಇಲ್ಲವಾದಲ್ಲಿ ನಪುಂಸಕನಾಗುತ್ತದೆ’ ಎಂದಿದ್ದಾರೆ.

About the author

ಕನ್ನಡ ಟುಡೆ

Leave a Comment