ಸಿನಿ ಸಮಾಚಾರ

ತಾರಕ್ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?

ಬೆಂಗಳೂರು; ತಾರಕ್ ಚಿತ್ರವನ್ನು ದರ್ಶನ್ ವೃತ್ತಿ ಜೀವನದಲ್ಲಿ ಒಂದು ವಿಶೇಷ ಚಿತ್ರವಾಗಿ ಪರಿಗಣಿಸಬಹುದು.

ಇದುವರೆಗೂ ಬರೀ ಮಾಸ್ ದರ್ಶನ್ ನೋಡಿದ್ದ,ಬಿಲ್ಡಪ್ ದೃಶ್ಯಗಳೇ ಇದ್ದ ದರ್ಶನ್ ಚಿತ್ರ ನೋಡಿ ನೋಡಿ ಬೇಸತ್ತಿದ್ದ ಕನ್ನಡ ಪ್ರೇಕ್ಷಕರಿಗೆ ದರ್ಶನ್ ಸರ್ಪೈಸ್ ಗಿಪ್ಟ್ ಕೊಟ್ಟಿದ್ದಾರೆ.

ಕೌಟುಂಬಿಕ ಚಿತ್ರ ನಿರ್ದೇಶಕ ಪ್ರಕಾಶ್ ಒಂದು ಉತ್ತಮ ಮನರಂಜನೆಯ ತಾತ-ಮೊಮ್ಮಗನ ಸೆಂಟಿಮೆಂಟ್ ಕಥಾನಕವನ್ನು ಅದ್ಭುತವಾಗಿ ತೆರೆಗೆ ತಂದಿದ್ದಾರೆ.

ರಾಜ್ಯಾದ್ಯಂತ ತಾರಕ್‌ ಚಿತ್ರ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಅದರ ಜತೆಗೆ ಗಲ್ಲಾ ಪೆಟ್ಟಿಗೆಯಲ್ಲಿಯೂ ಕೂಡ ಸದ್ದು ಮಾಡ್ತಿದೆ. ಮೊದಲ ದಿನವೇ ಬಾಕ್ಸ್‌ ಆಫೀಸ್‌ನಲ್ಲಿ ಈ ಚಿತ್ರ ಭರ್ಜರಿ ಕಲೆಕ್ಷನ್‌ ಮಾಡಿದೆ. ಅಷ್ಟಕ್ಕೂ ಮೊದಲ ದಿನ ತಾರಕ್‌ ಬಾಚಿಕೊಂಡಿರುವುದು ಎಷ್ಟು ಗೊತ್ತಾ? 

ತಾರಕ್ ಚಿತ್ರ ಸುಮಾರು 300 ಥಿಯೇಟರ್’ಗಳಲ್ಲಿ ಬಿಡುಗಡೆಯಾಗಿತ್ತು.ಕೆಲವು ಕಡೆ ಬೆಳಗಿನ ಶೋ ಕೂಡ ನಡೆದಿತ್ತು.

ಬಾಕ್ಸ್ ಆಫೀಸ್ ಮೂಲಗಳ ಪ್ರಕಾರ ತಾರಕ್ ಚಿತ್ರ ಮೊದಲ ದಿನ ಸುಮಾರು 07 ಕೋಟಿಯಷ್ಟು ಕಲೆಕ್ಷನ್ ಮಾಡಿದೆ.

About the author

ಕನ್ನಡ ಟುಡೆ

Leave a Comment