ರಾಜ್ಯ ಸುದ್ದಿ

ತಿಂಗಳೊಳಗೆ ಬಿಎಸ್‌ವೈ ಸಿಎಂ; ಸುಳ್ಳಾದರೆ ಜ್ಯೋತಿಷ್ಯ ಹೇಳುವುದನ್ನು ಬಿಡುತ್ತೇವೆ ಎಂದ ಜ್ಯೋತಿಷ್ಯರು

ಹುಬ್ಬಳ್ಳಿ: ಇನ್ನೊಂದು ತಿಂಗಳೊಳಗೆ ರಾಜ್ಯ ಬಿಜೆಪಿ ವರಿಷ್ಠ ಬಿ ಎಸ್ ಯಡಿಯೂರಪ್ಪನವರು ಕರ್ನಾಟಕದ ಮುಖ್ಯಮಂತ್ರಿಗಳಾಗುತ್ತಾರೆ ಎಂದು ಜ್ಯೋತಿಷ್ಯ ಜೋಡಿಗಳಾದ ವಿದ್ವಾನ್ ಗಣೇಶ್ ಹೆಗಡೆ ಮತ್ತು ಪವನ್ ಜೋಶಿ ಭವಿಷ್ಯ ನುಡಿದಿದ್ದಾರೆ.

ಯಡಿಯೂರಪ್ಪ ಅವರ ಜಾತಕದ ಪ್ರಕಾರ ಅವರಿಗೆ ಮಾರ್ಚ್ 5ರೊಳಗೆ ಮುಖ್ಯಮಂತ್ರಿಯಾಗುವ ಯೋಗವಿದೆ. ಇದು ಸುಳ್ಳಾದರೆ ನಾವು ಜ್ಯೋತಿಷ್ಯ ಹೇಳುವ ಕಾಯಕವನ್ನು ಬಿಟ್ಟು ಬಿಡುತ್ತೇವೆ ಎಂದು ದ್ವಯರು ಹೇಳಿದ್ದಾರೆ. ನಾವು ಈ ಹಿಂದೆ ಹೇಳಿರುವ ಭವಿಷ್ಯ ನಿಜವಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ನಾವು ಹೇಳಿದ್ದೆವು. 2008ರಲ್ಲಿ ಬಿಎಸ್‌ವೈ ಮುಖ್ಯಮಂತ್ರಿಯಾಗುವುದಾಗಿ ಹೇಳಿದ್ದೆವು. ಇದು ಕೂಡ ನಿಜವಾಗಿತ್ತು ಎಂದು ಹೆಗಡೆ ಪ್ರತಿಪಾದಿಸಿದ್ದಾರೆ.

ಗೃಹಗತಿಗಳು ಬಿಎಸ್‌ವೈ ಅವರ ಪರವಾಗಿವೆ. ಆದರೆ ಮುಖ್ಯಮಂತ್ರಿಯಾಗಿ ಅವರ ಪ್ರಯಾಣ ಅಕ್ಟೋಬರ್ ತಿಂಗಳವರೆಗೆ ಸುಸೂತ್ರವಾಗಿರಲ್ಲ. ಕುಮಾರಸ್ವಾಮಿ ಅವರ ಗೃಹಗತಿಗಳು ಚೆನ್ನಾಗಿಲ್ಲ. ಏನೇ ಹೋಮ, ಹವನ ಮಾಡಿದರೂ ಅವರು ಅಧಿಕಾರ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೆಗಡೆ ಹೇಳಿದ್ದಾರೆ. ಪ್ರಧಾನ ಮಂತ್ರಿ  ಮೋದಿ ಅವರ ಖ್ಯಾತಿಯು ಮಾರ್ಚ್ ನಂತರ ಗಮನಾರ್ಹವಾಗಿ ಹೆಚ್ಚಲಿದ್ದು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 285 ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದಿದ್ದಾರೆ ಹೆಗಡೆ.

About the author

ಕನ್ನಡ ಟುಡೆ

Leave a Comment