ರಾಜಕೀಯ

ತುಮಕೂರು: ಮಕ್ಕಳಿಗೆ ಶಿವಕುಮಾರ ಸ್ವಾಮೀಜಿ ಹೆಸರಿಟ್ಟ ಪೋಷಕರು

ತುಮಕೂರು: ಕಳೆದ ಜನವರಿ 21ರಂದು ಲಿಂಗೈಕ್ಯರಾದ ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ 112ನೇ ಜಯಂತಿ ನಿನ್ನೆ ನಡೆಯಿತು. ಕಳೆದ 80 ವರ್ಷಗಳ ಶ್ರೀಗಳ ಹುಟ್ಟುಹಬ್ಬ ಆಚರಣೆ ನಿನ್ನೆ ಶ್ರೀಗಳಿಲ್ಲದೆ ಅಪಾರ ಭಕ್ತಾದಿಗಳು ಮತ್ತು ಶಿಷ್ಯವರ್ಗದ ಸೇರ್ಪಡೆಯಿಂದ ನೆರವೇರಿತು. ಈ ಸಂದರ್ಭದಲ್ಲಿ ಬೆಂಗಳೂರಿನ ಡಾ.ಶಿವಕುಮಾರ ಸ್ವಾಮೀಜಿ ಭಕ್ತರ ಸಂಸ್ಥೆಯ 112 ಮಕ್ಕಳಿಗೆ ಶಿವಕುಮಾರ ಸ್ವಾಮೀಜಿಯ ಹೆಸರನ್ನು ಬಳಸಿಕೊಳ್ಳಲಾಯಿತು. 15 ದಿನಗಳಿಂದ ಒಂದು ವರ್ಷದವರೆಗಿನ ಮಠಕ್ಕೆ ಕರೆದುಕೊಂಡ ಬಂದ ಮಕ್ಕಳಿಗೆ ಶಿವಕುಮಾರ ಸ್ವಾಮಿಗಳ ಹೆಸರನ್ನು ನಾಮಕರಣ ಮಾಡಲಾಯಿತು. ಪೋಷಕರು ತಮ್ಮ ಗಂಡು ಮಕ್ಕಳಿಗೆ ಶಿವಕುಮಾರ ಎಂದು ಮತ್ತು ಹೆಣ್ಣು ಮಕ್ಕಳಿಗೆ ಶಿವಾನಿ ಎಂದು ಹೆಸರಿಟ್ಟರು ಎಂದು ಬೆಂಗಳೂರಿನ ಜಕ್ಕೂರಿನ ಹೈಕೋರ್ಟ್ ವಕೀಲ ಮತ್ತು ಸಂಸ್ಥೆಯ ಅಧ್ಯಕ್ಷ ಜಯಣ್ಣ. ಸಿದ್ದಗಂಗಾ ಮಠದ ಗೋಶಾಲ ಸಿದ್ದೇಶ್ವರ ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ ಮೈಸೂರಿನ ಯುವರಾಜ ಯದುವೀರ ಒಡೆಯರ್, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿ, ಪೇಜಾವರ ಮಠದ ಸ್ವಾಮೀಜಿ ಹಾಗೂ ಇತರರು ಹಾಜರಿದ್ದರು.

About the author

ಕನ್ನಡ ಟುಡೆ

Leave a Comment