ರಾಷ್ಟ್ರ ಸುದ್ದಿ

ತೆಲಂಗಾಣ ಚುನಾವಣೆಗೆ ಸ್ಪರ್ಧಿಸದಿರಲು ಪವನ್ ಕಲ್ಯಾಣ ಪಕ್ಷ ನಿರ್ಧಾರ

ಅಮರಾವತಿ: ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಯತ್ತ ಹೆಚ್ಚು ಗಮನಹರಿಸುವುದಕ್ಕಾಗಿ ಡಿಸೆಂಬರ್ 7ರಂದು ನಡೆಯುವ ತೆಲಂಗಾಣ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸದಿರಲು ಖ್ಯಾತ ತೆಲುಗು ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ಅವರ ಪಕ್ಷ ಜನಸೇನಾ ನಿರ್ಧರಿಸಿದೆ. ಪಕ್ಷದ ಎಲ್ಲಾ ನಾಯಕರೊಂದಿಗೆ ಚರ್ಚಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ತಿಳಿಸಿದ್ದಾರೆ. ತೆಲಂಗಾಣ ವಿಧಾನಸಭೆ ಚುನಾವಣೆ ನಿಗದಿಯಂತೆ 2019ರಲ್ಲಿ ನಡೆದಿದ್ದರೆ ನಾವು ಸ್ಪರ್ಧಿಸುತ್ತಿದ್ದೇವೆ. ಆದರೆ ಅವಧಿಗೂ ಮುನ್ನ ನಡೆಯುತ್ತಿರುವುದರಿಂದ ನಮ್ಮ ಪಕ್ಷ ಸ್ಪರ್ಧೆಗೆ ಸಿದ್ಧವಾಗಿಲ್ಲ. ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಜನಸೇನಾ ಸ್ಪರ್ಧಿಸಲಿದೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ. ತೆಲಂಗಾಣದಲ್ಲಿ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು, ವೈಎಸ್ ಆರ್ ಕಾಂಗ್ರೆಸ್ ಸಹ ಚುನಾವಣೆಯಿಂದ ದೂರ ಉಳಿದಿದೆ.

About the author

ಕನ್ನಡ ಟುಡೆ

Leave a Comment