ರಾಷ್ಟ್ರ ಸುದ್ದಿ

ತೆಲಂಗಾಣ ರಾಜ್ಯದ ನೂತನ ಸಿಎಂ ಆಗಿ ಗುರುವಾರ ಕೆಸಿಆರ್ ಪ್ರಮಾಣ ವಚನ ಸ್ವೀಕಾರ

ಹೈದರಾಬಾದ್: ತೆಲಂಗಾಣ ರಾಜ್ಯದ ನೂತನ ಸಿಎಂ ಆಗಿ ಕೆ ಚಂದ್ರಶೇಖರ ರಾವ್ ಅವರು ಇದೇ ಗುರುವಾರ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಟಿಆರ್ ಎಸ್ ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆಗಳು ನಡೆಯುತ್ತಿದ್ದು, ಇದೇ ಗುರುವಾರ ಟಿಆರ್ ಎಸ್ ಅಧಿನಾಯಕ ಕೆ ಚಂದ್ರಶೇಖರ ರಾವ್ ಅವರು 2ನೇ ಬಾರಿಗೆ ತೆಲಂಗಾಣ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕೆಸಿಆರ್​ ನೇತೃತ್ವದ ಟಿಆರ್​ಎಸ್ 88 ಸ್ಥಾನಗಳನ್ನು ಗೆದ್ದು ಬೀಗಿತ್ತು. ಮಂಗಳವಾರ ಪ್ರಕಟವಾದ ಚುನಾವಣಾ ಫಲಿತಾಂಶದಲ್ಲಿ ಟಿಆರ್ ಎಸ್ ಪ್ರಚಂಡ ಜಯ ಸಾಧಿಸಿತ್ತು. ಕೆಸಿಆರ್​ ಬುಧವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅವರು ಗುರುವಾರಕ್ಕೆ ಪ್ರಮಾಣವಚನವನ್ನು ಮುಂದೂಡಿದ್ದಾರೆ ಎಂದು ಹೇಳಲಾಗಿದೆ.

About the author

ಕನ್ನಡ ಟುಡೆ

Leave a Comment