ಸಿನಿ ಸಮಾಚಾರ

ತೋತಾಪುರಿಯಲ್ಲಿ ಶಕೀಲಾ ಭಾನು ಪಾತ್ರದಲ್ಲಿ ಅದಿತಿ ಪ್ರಭುದೇವ

ಬೆಂಗಳೂರು:  ಜಗ್ಗೇಶ್‌ ಅಭಿನಯದ, ವಿಜಯ ಪ್ರಸಾದ್‌ ನಿರ್ದೇಶನದ “ತೋತಾಪುರಿ’ ಚಿತ್ರ ಆರಂಭವಾಗಿರುವ ಬಗ್ಗೆ ನಿಮಗೆ ಗೊತ್ತೇ ಇದೆ. ಈಗಾಗಲೇ ಸುಮಾರು 25 ದಿನಗಳ ಕಾಲ ಬನ್ನೂರಿನಲ್ಲಿ ಚಿತ್ರೀಕರಣ ನಡೆದಿದೆ.
ಧೈರ್ಯಂ ಮೂಲಕ ಪಾದಾರ್ಪಣೆ ಮಾಡಿದ  ನಾಯಕಿ ಅದಿತಿ “ತೋತಾಪುರಿ’ಯಲ್ಲಿ ಮುಸ್ಲಿಂ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಶಕೀಲಾ ಭಾನು ಎಂಬ ಪಾತ್ರದಲ್ಲಿ ನಟಿಸುತ್ತಿದ್ದು, ಪಾತ್ರ ಸಖತ್‌ ಬೋಲ್ಡ್‌ ಆಗಿದೆಯಂತೆ. ಈಗಾಗಲೇ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಅದಿತಿ, ಸಹಜವಾಗಿಯೇ ಸಿನಿಮಾ ಬಗ್ಗೆ  ಎಕ್ಸೈಟ್‌ ಆಗಿದ್ದಾರೆ. ಇನ್ನು ಚಿತ್ರದಲ್ಲಿ ಜಗ್ಗೇಶ್‌ ಅವರ ಪಾತ್ರ ಹಾಗೂ ಗೆಟಪ್‌ ಕೂಡಾ ಭಿನ್ನವಾಗಿದ್ದು, ಮತ್ತೂಂದು ಯಶಸ್ಸು ಗಳಿಸುವ ನಿರೀಕ್ಷೆಯಲ್ಲಿದೆ ಚಿತ್ರತಂಡ. ಈ ಚಿತ್ರವನ್ನು ಕೆ.ಎ.ಸುರೇಶ್‌ ನಿರ್ಮಿಸುತ್ತಿದ್ದಾರೆ. ನಿರ್ದೇಶಕ ವಿಜಯಪ್ರಸಾದ್‌ ಸಿನಿಮಾ. ವಿಜಯ ಪ್ರಸಾದ್‌ ಅವರ ಸಿನಿಮಾಗಳನ್ನು ನೋಡಿದರೆ ಅಲ್ಲಿ ನಾಯಕಿಗೆ ಸಾಕಷ್ಟು ವಿಭಿನ್ನ ಹಾಗೂ ಬೋಲ್ಡ್‌ ಪಾತ್ರಗಳನ್ನು ನೀಡುತ್ತಾ ಬಂದಿದ್ದಾರೆ. ಮುಸ್ಲಿಂ ಹುಡುಗಿಯ ಪಾತ್ರದಲ್ಲಿ ನಟಿಸಿರುವ ಅದಿತಿ ನಮಾಜ್ ಮಾಡುವುದು ಹಾಗೂ ಅವರ ಶೈಲಿಯಲ್ಲಿ ಕನ್ನಡ ಮಾತನಾಡುವುದನ್ನು ಪ್ರಾಕ್ಟೀಸ್ ಮಾಡುತ್ತಿದ್ದಾರಂತೆ, ಸೆಟ್ ಗೆ ಬರುವ ಮುನ್ನ ಎರಡು ದಿನ ಪ್ರಾಕ್ಟೀಸ್ ಮಾಡಿದ್ದಾಗಿ ಅದಿತಿ ಹೇಳಿದ್ದಾರೆ.
ಈ ಪಾತ್ರಕ್ಕಾಗಿ ಸುಮಾರು ಒಂದೂವರೆ ತಿಂಗಳಲ್ಲ ಅದಿತಿ ಆರು ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾರೆ, ಇನ್ನೂ ಚಿರಂಜೀವಿ ಸರ್ಜಾ ನಟನೆಯ ಸಿಂಗ ಚಿತ್ರಕ್ಕೂ ಅದಿತಿ ನಾಯಕಿಯಾಗಿದ್ದು ಆರೋಗ್ಯವಂತ ಹಳ್ಳಿ ಹುಡುಗಿ ಪಾತ್ರಕ್ಕಾಗಿ ಈ ತೂಕ ಹೆಚ್ಚಳ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ, ಇನ್ನೂ ತೋತಾಪುರಿಯಲ್ಲಿ ಭೈರವ ಗೀತ ನಾಯಕ ಧನಂಜಯ ಕೂಡ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ, ಸಿನಿಮಾದಲ್ಲಿ ಸುಮನ್ ರಂಗನಾಥ್ ಕೂಡ ನಟಿಸಿದ್ದಾರೆ.

About the author

ಕನ್ನಡ ಟುಡೆ

Leave a Comment