ರಾಜಕೀಯ

ತ್ಯಾಗ ಹೊಸತೇನಲ್ಲ; ಡಿಸಿಎಂ ಗೃಹ ಖಾತೆ ಬಿಟ್ಟು ಕೊಡುವುದು ಖಚಿತ

ಬೆಂಗಳೂರು: ನನಗೆ ತ್ಯಾಗ ಹೊಸತೇನಲ್ಲ ಎನ್ನುವ ಮೂಲಕ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ಗೃಹ ಖಾತೆಯನ್ನು ಬಿಟ್ಟು ಕೊಡುವ ಸೂಚನೆ ನೀಡಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾಡತನಾಡಿದ ಡಿಸಿಎಂ ನನಗೆ ತ್ಯಾಗ ಹೊಸತೇನಲ್ಲ. ನಾನು 8 ವರ್ಷಗಳ ಕಾಲ ಪಕ್ಷ ಅಧಿಕಾರದಲ್ಲಿರುವ ವೇಳೆ ಪಕ್ಷದ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ನನಗೆ ತ್ಯಾಗ ಅನ್ನುವುದು ಹೊಸತೇನಲ್ಲ. ಪಕ್ಷ ಏನು ತೀರ್ಮಾನ ಕೈಗೊಳ್ಳುತ್ತದೆ ಅದಕ್ಕೆ ನಾವೆಲ್ಲರೂ ಬದ್ಧರಿದ್ದೇವೆ

ನಮ್ಮ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ, ಬೇರೆಯವರ ಸಂಪರ್ಕದಲ್ಲಿ ಯಾಕೆ ಇರುತ್ತಾರೆ ಎಂದು ಬಿಜೆಪಿ ಶಾಸಕ ಉಮೇಶ್‌ ಕತ್ತಿ ಅವರಿಗೆ ಟಾಂಗ್‌ ನೀಡಿದರು. ಸಂಪುಟ ಸೇರ್ಪಡೆಯಾಗಿರುವ ಹಿರಿಯ ಸಚಿವರಾದ ಎಂ.ಬಿ.ಪಾಟೀಲ್‌ ಅವರು  ಗೃಹ ಖಾತೆಗೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.ಈ ಹಿನ್ನಲೆಯಲ್ಲಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರು ಖಾತೆ ಬಿಟ್ಟುಕೊಡಲು ಪರಮೇಶ್ವರ್‌ ಅವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಖಾತೆ ಹಂಚಿಕೆ ಹಗ್ಗ ಜಗ್ಗಾಟಕ್ಕೆ ಸಂಬಂಧಿಸಿ ಬುಧವಾರ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌ ನೇತೃತ್ವ ದಲ್ಲಿ ನಡೆದ ಸಭೆ ವಿಫ‌ಲವಾಗಿದ್ದು ಹೈಕಮಾಂಡ್‌ ಯಾವ ತೀರ್ಮಾನ ಕೈಗೊಳ್ಳುತ್ತದೆ ಕಾದು ನೋಡಬೇಕಿದೆ.

About the author

ಕನ್ನಡ ಟುಡೆ

Leave a Comment