ರಾಷ್ಟ್ರ ಸುದ್ದಿ

ತ್ರಿವಳಿ ತಲಾಕ್ ಮಸೂದೆ ಅಂಗೀಕಾರಕ್ಕೆ ರಾಜ್ಯಸಭೆಯಲ್ಲಿ ಕಾಂಗ್ರೆಸ್, ವಿಪಕ್ಷಗಳ ಅಡ್ಡಗಾಲು

ತ್ರಿವಳಿ ತಲಾಕ್ ಮಸೂದೆ ಅಂಗೀಕಾರಕ್ಕೆ ರಾಜ್ಯಸಭೆಯಲ್ಲಿ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಅಡ್ಡಗಾಲು ಹಾಕಿದ್ದು, ಯಾವುದೇ ಚರ್ಚೆಯಿಲ್ಲದೇ ಕಲಾಪ ವ್ಯರ್ಥವಾಗಿದೆ. ಲೋಕಸಭೆಯಲ್ಲಿ ಮಂಡನೆಯಾಗಿದ್ದನ್ನು ಯಥಾವತ್ ಆಗಿ ಅಂಗೀಕರಿಸಲು ರಾಜ್ಯಸಭೆಯೇನು ರಬ್ಬರ್ ಸ್ಟ್ಯಾಂಪ್ ಅಲ್ಲ ಎಂದು ವಿಪಕ್ಷಗಳು ಹೇಳಿದ್ದು, ತ್ರಿವಳಿ ತಲಾಕ್ ಮಸೂದೆಯನ್ನು ಮತ್ತೊಮ್ಮೆ ಪರಿಶೀಲಿಸಲು ಆಯ್ಕೆ ಸಮಿತಿಗೆ ಕಳಿಸಬೇಕೆಂದು ಆಗ್ರಹಿಸಿವೆ. ವಿಪಕ್ಷಗಳ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸರ್ಕಾರ ವಿವಾಹಿತ ಮುಸ್ಲಿಮ್ ಮಹಿಳೆಯರ ಹಕ್ಕುಗಳಿಗೆ ಮಹತ್ವವಾಗಿರುವ ವಿಷಯದಲ್ಲಿ ಚರ್ಚೆ ನಡೆಸುವುದರಿಂದ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಪಲಾಯನ ಮಾಡುತ್ತಿವೆ ಎಂದು ಆರೋಪಿಸಿದೆ. ರಾಜ್ಯಸಭೆಯಲ್ಲಿ ಸಚಿವ ರವಿಶಂಕರ್ ಪ್ರಸಾದ್ ಮಸೂದೆ ಮಂಡಿಸುತ್ತಿದ್ದಂತೆಯೇ ಸರ್ಕಾರ-ವಿಪಕ್ಷಗಳ ಸದಸ್ಯರ ನಡುವೆ ವಾಗ್ವಾದ ನಡೆದಿದ್ದು, ಯಾವುದೇ ಮಹತ್ವದ ಚರ್ಚೆ ನಡೆಯದೇ ಕಲಾಪವನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಯಿತು.

About the author

ಕನ್ನಡ ಟುಡೆ

Leave a Comment