ಆಹಾರ

ಥೈರಾಯ್ಡ್ ಗ್ರಂಥಿ ಆರೋಗ್ಯಕರವಾಗಿರಲು 9 ಆಹಾರಗಳು

ಥೈರಾಯ್ಡ್‌ ಸಮಸ್ಯೆ ಎನ್ನುವುದು ಇತ್ತೀಚೆಗೆ ಬಹುತೇಕರನ್ನು ಕಾಡುತ್ತಿರುವ ಸಮಸ್ಯೆಯಾಗಿದ್ದು ಈ ಥೈರಾಯ್ಡ್ ಸಮಸ್ಯೆಗೆ ಜೀವನಶೈಲಿ ಹಾಗೂ ಆಹಾರಶೈಲಿ ಪ್ರಮುಖ ಕಾರಣವಾಗಿದೆ. ಥೈರಾಯ್ಡ್ ಗ್ರಂಥಿ ಆರೋಗ್ಯಕರವಾಗಿರಲು ದೇಹಕ್ಕೆ ವ್ಯಾಯಾಮ ಅಗತ್ಯ ಹಾಗೂ ಆರೋಗ್ಯಕರ ಆಹಾರ ಸೇವನೆ ಮಾಡಬೇಕು.

ಥೈರಾಯ್ಡ್‌ ಗ್ರಂಥಿ ಆರೋಗ್ಯಕ್ಕೆ ಈ ಆಹಾರಗಳು ತುಂಬಾ ಒಳ್ಳೆಯದು;

1. ಸೇಬು : ಸೇಬಿನಲ್ಲಿರುವ ಪೆಕ್ಟಿನ್‌ ನಾರಿನಂಶ ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕುವಲ್ಲಿ ಸಹಾಯ ಮಾಡುತ್ತೆ.

2. ತೆಂಗಿನೆಣ್ಣೆ : ಥೈರಾಯ್ಡ್ ಗ್ರಂಥಿಯ ಆರೋಗ್ಯಕ್ಕೆ ತೆಂಗಿನೆಣ್ಣೆ ತುಂಬಾ ಒಳ್ಳೆಯದು. ಥೈರಾಯ್ಡ್ ಸಮಸ್ಯೆ ಇರುವವರು ದಿನಾ 1- 2 ಚಮಚ ತೆಂಗಿನೆಣ್ಣೆಯನ್ನು ಆಹಾರ ಜತೆ ಮಿಕ್ಸ್ ಮಾಡಿ ತಿಂದು ಥೈರಾಯ್ಡ್ ಹಾರ್ಮೋನ್‌ ನಿಯಂತ್ರಣದಲ್ಲಿಡಬಹುದು.

3. ಮೊಸರು : ಇದರಲ್ಲಿ ವಿಟಮಿನ್‌ ಡಿ ಇದ್ದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತೆ. ಥೈರಾಯ್ಡ್ ಸಮಸ್ಯೆ ನಿಯಂತ್ರಣಕ್ಕೆ ಜೀರ್ಣಕ್ರಿಯೆ ಸರಾಗವಾಗಿ ನಡೆಯಬೇಕು.

4. ಬೀನ್ಸ್ : ನಾರಿನಂಶ ಅಧಿಕವಿರುತ್ತದೆ, ಇದರಿಂದ ಮಲಬದ್ಧತೆ ಸಮಸ್ಯೆ ಕಾಡುವುದಿಲ್ಲ.

5. ಪಾಲಾಕ್‌ : ಇದರಲ್ಲಿ ಕಬ್ಬಿಣದಂಶ, ವಿಟಮಿನ್ ಬಿ ಇದ್ದು ಥೈರಾಯ್ಡ್ ಹಾರ್ಮೋನ್‌ ಉತ್ಪತ್ತಿಗೆ ಸಹಕಾರಿ.

6. ಸಿಹಿಕುಂಬಳಕಾಯಿ ಬೀಜ : ಇದರಲ್ಲಿ ಸತು ಇದ್ದು ಥೈರಾಯ್ಡ್ ಗ್ರಂಥಿಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

7. ವಾಲ್‌ನಟ್‌ : ಇದರಲ್ಲಿ ಒಮೆಗಾ 3 ಕೊಬ್ಬಿನಂಶವಿದ್ದು ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು.

8. ಬಾದಾಮಿ : ಬಾದಾಮಿಯಲ್ಲಿ ಕಬ್ಬಿಣದಂಶ, ಪ್ರೊಟೀನ್‌, ಸತುವಿನಂಶವಿದ್ದು ಆರೋಗ್ಯಕ್ಕೆ ಒಳ್ಳೆಯದು.

9. ಬೆಳ್ಳುಳ್ಳಿ : ಬೆಳ್ಳುಳ್ಳಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡಲು ಹಾಗೂ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತೆ.

About the author

ಕನ್ನಡ ಟುಡೆ

Leave a Comment