ರಾಷ್ಟ್ರ ಸುದ್ದಿ

ದಂತೇವಾಡ ನಕ್ಸಲ್ ದಾಳಿ: ಗಾಯಗೊಂಡಿದ್ದ ಪೊಲೀಸ್ ಹುತಾತ್ಮ

ರಾಯ್ಪುರ: ಛತ್ತೀಸ್ಗಢದ ದಂತೇವಾಡ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ್ದ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪೊಲೀಸ್ ಒಬ್ಬರು ಮಂಗಳವಾರ ಹುತಾತ್ಮರಾಗಿದ್ದು, ಇದರಂತೆ ಸಾವಿನ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.
ನಕ್ಸಲರ ದಾಳಿ ವೇಳೆ ಸಹಾಯಕ ಪೊಲೀಸ್ ರಾಕೇಶ ಕೌಶಲ್ ಅವರು ಗಂಭೀರವಾಗಿ ಗಾಯಗೊಂಡಿದ್ದರು, ರಾಕೇಶ್ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಎಂದು ಹುತಾತ್ಮರಾಗಿದ್ದಾರೆ. ಡಿಡಿನ್ಯೂಸ್ ವರದಿಗಾರ ಧೀರಜ್ ಕುಮಾರ್, ಸಹಾಯಕ ಮೊರ್ಮುಕ್ತ ಹಾಗೂ ಕ್ಯಾಮೆರಾಮ್ಯಾನ್ ಸಾಹು ಅವರು ಚುನಾವಣಾ ವರದಿಗಾರಿಕೆಗಾಗಿ ಛತ್ತೀಸ್ಗಢಕ್ಕೆ ತೆರಳಿದ್ದರು. ರಾಜಧಾನಿ ರಾಯಪುರದಿಂದ ಸುಮಾರು 450 ಕಿ.ಮೀ ದೂರದಲ್ಲಿರುವ ನಿಲವಾಯ ಎಂಬ ಗ್ರಾಮದ ಬಳಿ ಈ ಸಿಬ್ಬಂದಿ ಎರಡು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ನಡುವೆ ಇವರ ಕಾರಿನ ಮುಂದೆ ಪೊಲೀಸರ ಗಸ್ತು ಬೈಕ್ ಗಳು ಹೋಗಿವೆ. ಆ ಸಂದರ್ಭದಲ್ಲಿ 100ಕ್ಕೂ ಹೆಚ್ಚು ಸಂಖ್ಯೆಯಲ್ಲಿದ್ದ ನಕ್ಸಲರು ಏಕಾಏಕಾ ದಾಳಿ ನಡೆಸಿದ್ದಾರೆ.

ಈ ವೇಳೆ ಪೊಲೀಸರು ಪ್ರತಿ ದಾಳಿ ನಡೆಸಿದ್ದು, ಬರೋಬ್ಬರಿ 1 ಗಂಟೆಗೂ ಹೆಚ್ಚು ಗುಂಡಿನ ಚಕಮಕಿ ನಡೆದಿದೆ. ಈ ಚಕಮಕಿ ವೇಳೆ ದೂರದರ್ಶನದ ಪ್ರತಕರ್ತರು ಗಾಯಗೊಂಡಿದ್ದರು. ಛಾಯಾಗ್ರಾಹಕ ಸಾಹು ಘಟನೆಯಲ್ಲಿ ಮೃತಪಟ್ಟಿದ್ದರು. ಪೊಲೀಸರ ದಾಳಿ ಹೆಚ್ಚಾದ ಹಿನ್ನಲೆಯಲ್ಲಿ ನಕ್ಸಲರು ಸಮೀಪದ ಗ್ರಾಮಕ್ಕೆ ಓಡಿದ್ದರು. ಘಟನೆಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದರು, ಅಲ್ಲದೆ, ಮತ್ತಿಬ್ಬರು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದರು.

About the author

ಕನ್ನಡ ಟುಡೆ

Leave a Comment