ಸಿನಿ ಸಮಾಚಾರ

ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಬ್ರಿಟನ್ ಪಾರ್ಲಿಮೆಂಟ್ ನಿಂದ ಸನ್ಮಾನ

ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಬ್ರಿಟಿಷ್ ಪಾರ್ಲಿಮೆಂಟ್‌ ಗೌರವಿಸಲು ನಿರ್ಧರಿಸಿದೆ. ಈ ಮೂಲಕ ಬ್ರಿಟಿಷ್ ಪಾರ್ಲಿಮೆಂಟ್‌ನಿಂದ ಸನ್ಮಾನಿಸಲ್ಪಡುವ ಮೊದಲ ದಕ್ಷಿಣ ಭಾರತದ ನಟ ಎನ್ನುವ ಹೆಗ್ಗಳಿಕೆಗೆ ದರ್ಶನ್ ಪಾತ್ರರಾಗಿದ್ದಾರೆ.

ದರ್ಶನ್ ರವರು ಬಹು ಬೇಡಿಕೆಯ ನಟನಾಗಿದ್ದು ಹಲವು ದಾಖಲೆಗಳನ್ನು ಬರೆಯುವುದರಲ್ಲಿ ಮೊದಲಿಗರಾಗಿರುವ ದರ್ಶನ್ಗೆ ಮತ್ತೊಂದು ವಿಶೇಷ ದಾಖಲೆಯ ಪಟ್ಟಿ ಸೇರಲಿದ್ದಾರೆ.

ಇತ್ತೀಚೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಬ್ರಿಟಿಷ್ ಪಾರ್ಲಿಮೆಂಟ್‌ ಹೌಸ್‌ನಿಂದ ಗ್ಲೋಬಲ್ ಡೈವರ್ಸಿಟಿ ಅವಾರ್ಡ್ ದೊರಕಿತ್ತು. ಈಗ ದರ್ಶನ್ ಆ ಗೌರವಕ್ಕೆ ಪಾತ್ರವಾಗುತ್ತಿದ್ದು, ಬ್ರಿಟಿಷ್‌ ಪಾರ್ಲಿಮೆಂಟ್‌ನಿಂದ ಪಶಸ್ತಿ ಪಡೆಯುತ್ತಿರುವ 5ನೇ ಭಾರತೀಯ ನಟ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿದ್ದಾರೆ.

ಮೂಲಗಳ ಪ್ರಕಾರ ದರ್ಶನ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಲು ಇದೇ 18ಕ್ಕೆ ಲಂಡನ್‌ಗೆ ಹಾರಲಿದ್ದಾರೆ. 19ರಂದು ಪ್ರಶಸ್ತಿ ಪಡೆದು 26ಕ್ಕೆ ಹಿಂತಿರುಗಿ ಮತ್ತೆ ‘ಕುರುಕ್ಷೇತ್ರ’ ಚಿತ್ರದ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ದರ್ಶನ್‌ಗೆ ಈ ಗೌರವ ಲಭಿಸುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಕುರುಕ್ಷೇತ್ರ ಸೆಟ್‌ನಲ್ಲಿ ಸಂಭ್ರಮಾಚರಣೆ ನಡೆದಿದೆ.

About the author

ಕನ್ನಡ ಟುಡೆ

Leave a Comment