ಸುದ್ದಿ

ದಲಿತರಿಗೆ ಮನೆಗೆ ಭೋಜನಕ್ಕೆ ಆಹ್ವಾನಿಸಿದ ಬಿ.ಎಸ್.ವೈ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‍. ಯಡಿಯೂರಪ್ಪನವರು ಆ.28ರಂದು ಇಲ್ಲಿಯ ಡಾಲರ್ಸ್‌ ಕಾಲೊನಿಯ ತಮ್ಮ ನಿವಾಸಕ್ಕೆ ದಲಿತರನ್ನು ಭೋಜನಕ್ಕೆ ಆಹ್ವಾನಿಸಿದ್ದಾರೆ. ಬಿಜೆಪಿ ಜನಸಂಪರ್ಕ ಅಭಿಯಾನ ವೇಳೆ ರಾಜ್ಯದ ನಾನಾ ಭಾಗದಲ್ಲಿರುವ ದಲಿತರ ಮನೆಗೆ ಭೇಟಿ ನೀಡಿ ಊಟ ಸೇವಿಸಿದ್ದರು.
ಇದೀಗ ಅದಕ್ಕೆ ಪೂರಕವಾಗಿ ದಲಿತರನ್ನು ತಮ್ಮ ಮನೆಗೆ ಆಹ್ವಾನಿಸಿದ್ದಾರೆ. ಇವರಿಗಾಗಿ ಆ.28 ರಂದು ವಿಶೇಷ ಭೋಜನ ವ್ಯವಸ್ಥೆಯ ಸಿದ್ಧತೆ ಮಾಡಿಕೊಳ್ಳಲು ಬಿಎಸ್‌ವೈ ಸೂಚಿಸಿದ್ದಾರೆ.
ದಲಿತರ ಮನೆಗೆ ಭೇಟಿ ಕೊಟ್ಟಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‍. ಯಡಿಯೂರಪ್ಪ ಅವರ ನಡೆಯನ್ನು ಲೇವಡಿ ಮಾಡಿದ್ದ ರಾಜ್ಯ ಸರ್ಕಾರ, ದಲಿತರ ಮನೆಗೆ ನೀವು ಹೋಗುವ ಜತೆ ಅವರನ್ನೂ ನಿಮ್ಮ ಮನೆಗೆ ಕರೆಸಿಕೊಳ್ಳಿ. ನಿಮ್ಮ ಗಂಡು ಮಕ್ಕಳಿಗೆ ದಲಿತರ ಮನೆಯ ಹೆಣ್ಣುಮಕ್ಕಳನ್ನು ತಂದುಕೊಳ್ಳಿ ಎಂದು ಸಿಎಂ ಸೇರಿದಂತೆ ಹಲವು ಕಾಂಗ್ರೆಸ್‌ ನಾಯಕರು ಆಗ್ರಹಿಸಿದ್ದರು. ಇದೀಗ ಇದಕ್ಕೆ ಪ್ರತ್ಯುತ್ತರವಾಗಿ ಬಿಎಸ್‌ವೈ ದಲಿತರನ್ನು ಊಟಕ್ಕೆ ಆಹ್ವಾನಿಸಿದ್ದಾರೆ.

About the author

ಕನ್ನಡ ಟುಡೆ

Leave a Comment