ಸಿನಿ ಸಮಾಚಾರ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರಿಯಾಂಕಾ ಚೋಪ್ರಾ – ನಿಕ್ ಜೋನಸ್

ಜೋಧಪುರ್: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಶನಿವಾರ ಅಮೆರಿಕದ ಗಾಯಕ ನಿಕ್ ಜೋನಸ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಇಂದು ಜೋಧಪುರದ ಉಮೈದ್ ಭವನದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಬಾಲಿವುಡ್ ನಟಿ ಪ್ರಿಯಾಂಕಾ ಹಾಗೂ ಹಾಲಿವುಡ್ ಗಾಯಕ ನಿಕ್ ಅವರು ಪರಸ್ಪರ ‘I Do'(ನಾನು ಒಪ್ಪಿದ್ದೇನೆ)  ಎಂದು ಹೇಳುವ ಮೂಲಕ ಸತಿ-ಪತಿಗಳಾದರು. ಈ ವೇಳೆ ಪ್ರಿಯಾಂಕಾ ತಾಯಿ ಮಧು ಚೋಪ್ರಾ, ಸಹೋದರ ಸಿದ್ಧಾರ್ಥ ಮತ್ತು ಸೋದರ ಸಂಬಂಧಿ ಪರಿಣೀತಿ ಚೋಪ್ರಾ, ನಿಕ್ ಪೋಷಕರಾದ ಪೌಲ್ ಕೇವಿನ್, ಡೇನಿಸ್, ಸಹೋದರರ ಕೇವಿನ್ ಮತ್ತು ಆತನ ಪತ್ನಿ ಡೇನಿಲ್ ಸೇರಿದಂತೆ ಹಲವು ಆಪ್ತರು ಉಪಸ್ಥಿತರಿದ್ದರು. ನಾಳೆ  ಹಿಂದೂ ಶೈಲಿಯಲ್ಲಿ ಪ್ರಿಯಾಂಕಾ ಹಾಗೂ ನಿಕ್ ವಿವಾಹ ನೆರವೇರಲಿದೆ. ಪ್ರಿಯಾಂಕಾ ಚೋಪ್ರಾ ಅವರು ಹಿಂದೂ ಶೈಲಿಯ ವಿವಾಹಕ್ಕಾಗಿ ಅಬುಜಾನಿ-ಸಂದೀಪ್ ಕೋಸ್ಲಾ ವಿಶೇಷವಾಗಿ ವಿನ್ಯಾಸಗೊಳಿಸಿರುವ ವಸ್ತ್ರ ಧರಿಸಲಿದ್ದಾರೆ.

About the author

ಕನ್ನಡ ಟುಡೆ

Leave a Comment