ಸಿನಿ ಸಮಾಚಾರ

ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಸ್ಟಾರ್‌ ನಟ ವಿಶಾಲ್‌

ತಮಿಳಿನ ನಿರ್ಮಾಪಕರ ಸಂಘದ ಅಧ್ಯಕ್ಷ ಮತ್ತು ಸ್ಟಾರ್‌ ನಟ ವಿಶಾಲ್‌ ಸದ್ಯದಲ್ಲಿ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ. ವಿಶಾಲ್‌ ಹೈದ್ರಾಬಾದ್‌ ಮೂಲದ ತೆಲುಗು ಹುಡುಗಿ ಅನಿಶಾ ರೆಡ್ಡಿ ಜತೆ ವಿವಾಹ ಮಾಡಿಕೊಳ್ಳಲಿದ್ದು, ಈ ಬಗ್ಗೆ ಸೋಷಿಯಲ್‌ ಮೀಡಿಯಾಲ್ಲಿ ಬರೆದುಕೊಂಡಿದ್ದಾರೆ.

ಕೆಲ ದಿನಗಳಿಂದ ವಿಶಾಲ್‌ ಮದುವೆ ಸುದ್ದಿಗಳು ಓಡಾಡುತ್ತಿದ್ದವು. ಆದರೆ ವಿಶಾಲ್‌ ಮದುವೆ ಯನ್ನು ನಿರಾಕರಿಸಿ ನಾನು ಕಲಾವಿದರ ಸಂಘದ ಕಟ್ಟಡದ ಕೆಲಸಗಳು ಮುಗಿದ ಮೇಲೆ ಮದುವೆಯಾಗುತ್ತೇನೆ ಎಂದಿದ್ದರು. ಈಗ ಕಟ್ಟಡದ ಕೆಲಸಗಳು ಕೊನೆಯ ಹಂತಕ್ಕೆ ಬಂದಿದ್ದು, ವಿಶಾಲ್‌ ಸಹ ನವ ಜೀವನ ಆರಂಭಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅನಿಶಾ ಎಂಬುವವರನ್ನು ವಿವಾಹವಾಗುತ್ತಿದ್ದೇನೆ. ಸದ್ಯದಲ್ಲೇ ದಿನಾಂಕವನ್ನು ತಿಳಿಸುವುದಾಗಿ ಹೇಳಿರುವ ಅವರು ಅನಿಶಾ ಜತೆ ಇರುವ ಪೋಟೋವನ್ನು ಸಹ ಟ್ವೀಟ್‌ ಮಾಡಿದ್ದಾರೆ.

About the author

ಕನ್ನಡ ಟುಡೆ

Leave a Comment