ರಾಜ್ಯ ಸುದ್ದಿ

ದಾಖಲೆ ಮಟ್ಟದಲ್ಲಿ ಇಳಿಕೆಯಾಗುತ್ತಿದೆ ಪೆಟ್ರೋಲ್​ ಡೀಸೆಲ್​

ಬೆಂಗಳೂರು: ಎರಡೂವರೆ ತಿಂಗಳ ಹಿಂದೆ 85 ರೂ. ಗಡಿ ತಲುಪಿ ಗ್ರಾಹಕರ ಜೇಬಿಗೆ ಬಿಸಿ ಮುಟ್ಟಿಸಿದ್ದ ಪೆಟ್ರೋಲ್​ ದರ ಇತ್ತೀಚೆಗೆ ದಾಖಲೆ ಮಟ್ಟದಲ್ಲಿ ಇಳಿಕೆಯಾಗಿದೆ. ಶುಕ್ರವಾರವೂ ದೇಶಾದ್ಯಂತ ಪೆಟ್ರೋಲ್​, ಡೀಸೆಲ್​ ದರದಲ್ಲಿ ಇಳಿಕೆಯಾಗಿ ಗ್ರಾಹಕರ ಮೊಗದಲ್ಲಿ ನಗು ಮೂಡಿಸಿದೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 19 ಪೈಸೆ ಇಳಿಕೆ ನಂತರ ಪ್ರತಿ ಲೀಟರ್​ ಪೆಟ್ರೋಲ್​ ಬೆಲೆ 69.55 ರೂ.ಗಳಿಷ್ಟಿದ್ದು, 14 ಪೈಸೆ ಇಳಿಕೆ ನಂತರ 63.62 ರೂ.ಗೆ ಮಾರಾಟಗೊಳ್ಳುತ್ತಿದೆ. ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿಯೂ ಶುಕ್ರವಾರ ಪೆಟ್ರೋಲ್​, ಡೀಸೆಲ್​ ದರ ಕ್ರಮವಾಗಿ 19 ಮತ್ತು 14 ಪೈಸೆ ಇಳಿಕೆಯಾಗಿ, 70.08 ರೂ. ಮತ್ತು 63.94 ರೂ.ಗೆ ಮಾರಾಟವಾಗುತ್ತಿದೆ.

ವಾಣಿಜ್ಯ ನಗರಿ ಮುಂಬೈನಲ್ಲಿ ಲೀ. ಪೆಟ್ರೋಲ್‌ 75.18 ರೂ.ಗೆ ಮಾರಾಟವಾಗುತ್ತಿದ್ದು, 18 ಪೈಸೆ ಕಡಿಮೆಯಾಗಿದೆ. ಇನ್ನು ಡೀಸೆಲ್‌ ಲೀ.ಗೆ 15 ಪೈಸೆ ಕಡಿಮೆಯಾಗಿ 66.57ರೂ.ಗಳಷ್ಟಿದೆ. ಚೆನ್ನೈನಲ್ಲಿ ಪೆಟ್ರೋಲ್‌ ಲೀ.ಗೆ 20 ಪೈಸೆ ಕಡಿಮೆಯಾಗಿ 72.16 ರೂ.ಗಳಿದ್ದರೆ, ಲೀಟರ್‌ ಡೀಸೆಲ್‌ 15 ಪೈಸೆ ಇಳಿಕೆ ನಂತರ 67.16 .ಗಳಿಗೆ ಮಾರಾಟವಾಗುತ್ತದೆ. ಅದೇರೀತಿ ಕೋಲ್ಕತದಲ್ಲಿಯೂ 71.65 ರೂ.ಗೆ ಪೆಟ್ರೋಲ್‌ ಮಾರಾಟವಾಗುತ್ತಿದ್ದು, ಡೀಸೆಲ್‌ 65.37 ರೂ.ಗಳಷ್ಟಿದೆ.

About the author

ಕನ್ನಡ ಟುಡೆ

Leave a Comment