ರಾಜಕೀಯ

ದಾವಣಗೆರೆ ಲೋಕಸಭಾ ಕ್ಷೇತ್ರದ: ಬಿಜೆಪಿ ಅಭ್ಯರ್ಥಿಯಾಗಿ ಸಂಸದ ಜಿ.ಎಂ. ಸಿದ್ದೇಶ್ವರ ನಾಮಪತ್ರ ಸಲ್ಲಿಕೆ

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸಂಸದ ಜಿ.ಎಂ. ಸಿದ್ದೇಶರ ಇಂದು ಸಾಂಕೇತಿಕವಾಗಿ  ನಾಮಪತ್ರ ಸಲ್ಲಿಸಿದರು. ಸತತವಾಗಿ ಮೂರು ಬಾರಿ ಸಂಸದರಾಗಿರುವ ಜಿ.ಎಂ. ಸಿದ್ದೇಶ್ವರ ಅವರು ಜಿಲ್ಲಾ ಚುನಾವಣಾಧಿಕಾರಿ ಜಿ. ಎನ್. ಶಿವಮೂರ್ತಿ ಅವರಿಗೆ ಸಿದ್ದೇಶ್ವರ ನಾಮಪತ್ರ ಸಲ್ಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದೇಶ್ವರ, ಇಂದು ನಮ್ಮ ಮನೆ ದೇವರ ಶ್ರೀ ಶೈಲ ಮಲ್ಲಿಕಾರ್ಜುನ ದಿನ. ಹೀಗಾಗಿ ಹಿರಿಯರ ಸಲಹೆಯಂತೆ ನಾಮಪತ್ರ ಸಲ್ಲಿಸಿದ್ದೇನೆ, ಮಧ್ಯಾಹ್ನ ಮತ್ತೊಂದು ನಾಮಪತ್ರವನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.ಕಾಂಗ್ರೆಸ್  ನನಗೆ ಎದುರಾಳಿ. ಅದೊಂದು ರಾಷ್ಟ್ರೀಯ ಪಕ್ಷವಾಗಿದ್ದು, ಏಪ್ರಿಲ್ 4ರವರೆಗೂ ಸಮಯ ಇದೆ. ಅವರ ಬಗ್ಗೆ ಹಗುರುವಾಗಿ ಮಾತನಾಡುವುದಿಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿ  ಅಲೆ ಜೊತೆಗೆ ಆರು ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಶಾಸಕರು, ಇಬ್ಬರು ಮಾಜಿ ಶಾಸಕರು ಹಾಗೂ ಸಂಸದನಾಗಿ ಮಾಡಿರುವ ಕೆಲಸಗಳು ಗೆಲುವಿಗೆ ಪೂರಕವಾಗಲಿವೆ.ಜಿಲ್ಲೆಯಲ್ಲಿನ ಯುವ ಮತದಾರರು ಶೇ, 100 ರಷ್ಟು ನರೇಂದ್ರ ಮೋದಿ ಅಭಿಮಾನಿಗಳಾಗಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು. ಮತ್ತೊಂದೆಡೆ ಬಾಗಲಕೋಟೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ವೀಣಾ ಕಾಶಪ್ಪನವರ್ ಇಂದು ನಾಮಪತ್ರ ಸಲ್ಲಿಸಿದರು.

About the author

ಕನ್ನಡ ಟುಡೆ

Leave a Comment