ರಾಜಕೀಯ

ದಿಡೀರ್ ಪತ್ರಿಕಾಗೋಷ್ಠಿ ನಡೆಸಿದ ವಿ ಆರ್ ಎಲ್ ಸಮೂಹ ಸಂಸ್ಥೆಯ ಮುಖ್ಯಸ್ಥ ವಿಜಯ ಸಂಕೇಶ್ವರ

ಬೆಂಗಳೂರು: ವಿ ಆರ್ ಎಲ್ ಸಮೂಹ ಸಂಸ್ಥೆ ಮುಖ್ಯಸ್ಥ ವಿಜಯ್ ಸಂಕೇಶ್ವರ ಹುಬ್ಬಳ್ಳಿಯಲ್ಲಿ ದಿಡೀರ್ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ರಾಜ್ಯ ಸಭೆ ಟಿಕೆಟ್ ನೀಡದೆ ಇರುವುದಕ್ಕೆ ಅಸಮಾಧನದ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಹಿಂದೆ ವಾಜಪೇಯಿ ಅಡ್ವಾಣಿ ನನಗೆ ಸಚಿವ ಸ್ಥಾನ ನೀಡಲು ಸಿದ್ಧರಿದ್ದರು.ಆದರೆ ಪತ್ರಿಕೆ ಆರಂಭಿಸಲು ನಾನೆ ಕೈ ಬಿಟ್ಟೆ ನಂತರ ಮೂರು ಬಾರಿ ಲೋಕಸಭೆಯ ಟಿಕೆಟ್ ನೀಡಿದ್ದರು.ಒಮ್ಮೆ ಎಂ ಎಲ್ ಸಿ ಟಿಕೆಟ್ ಕೊಟ್ಟಿದ್ದರು.ಆದರೆ ಮೊನ್ನೆ ರಾಜ್ಯ ಸಭೆ ಚುನಾವಣೆಗೆ ನನಗೆ ಟಿಕೆಟ್ ಕೊಡುವುದಾಗಿ ಹೇಳಿ ಪೇಪರ್ ಸಿದ್ಧಪಡಿಸಲು ಹೇಳಿದ್ದಾರೆ.

ಸ್ವತಃ ಬಿಎಸ್ ಯಡಿಯೂರಪ್ಪನವರೇ ಫೋನ್ ಮಾಡಿದ್ದರು.ನಾನಾಗಿ ಎಂದೂ ಬಿಜೆಪಿ ಟಿಕೆಟ್ ಬಯಸಲಿಲ್ಲ ಅವರೇ ಕರೆದುಕೊಟ್ಟಿದ್ದರು.ಈ ಬಾರಿ ಅವರೇ ಕರೆದು ಟಿಕೆಟ್ ಕೊಡಲಿಲ್ಲ ಎಂದು ವಿಜಯ್ ಸಂಕೇಶ್ವರ ಬಿಜೆಪಿ ಮೇಲೆ ತಮ್ಮ ಮುನಿಸು ವ್ಯಕ್ತಪಡಿಸಿದ್ದಾರೆ.

About the author

ಕನ್ನಡ ಟುಡೆ

Leave a Comment