ರಾಜಕೀಯ

ದಿನಾ ಛತ್ರಿ ಅಡಿ ಶೂಟಿಂಗ್‌, ಬಿಸಿಲಲ್ಲಿ ರೈತರ ಕಷ್ಟ ನೋಡ್ತಿದ್ದಾರೆ: ಮುಖ್ಯಮಂತ್ರಿ

ಹಾಸನ : ದಿನವೂ ಛತ್ರಿ ಅಡಿ ಕುಳಿತು ಶೂಟಿಂಗ್‌ ಮಾಡುತ್ತಿದ್ದಾರೆ. ಈಗ ಹಳ್ಳಿಗಳಿಗೆ ಬಂದಿದ್ದಾರೆ. ಬಿಸಿಲಲ್ಲಿ ರೈತರ ಕಷ್ಟ ಏನು ಅಂತ ಅರ್ಥ ಆಗಲಿ…ಇದು ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ಪಕ್ಷೇತರ ಅಭ್ಯರ್ಥಿ ಸಮಲತಾ ಪರ ಪ್ರಚಾರ ಮಾಡುತ್ತಿರುವ ನಟರನ್ನು ಲೇವಡಿ ಮಾಡಿದ ಪರಿ.

ಹಾಸನದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಎಂದೂ ಜಾತಿ ರಾಜಕಾರಣ ಮಾಡಿದವನಲ್ಲ.ನಾನು ಜಾತಿಗೆ ಅಂಟಿಕೊಂಡವನಲ್ಲ ಎಂದರು. ನನ್ನ ಬಳಿ ಬಂದವರ ಬಳಿ ಎಂದೂ ನೀನು ಯಾವ ಜಾತಿಯವ ಎಂದು ಕೇಳಲಿಲ್ಲ. ಕಷ್ಟ ಏನು ಎಂದು ಕೇಳಿದ್ದೇನೆ ಎಂದರು. ಮಂಡ್ಯ ರಣಕಣದಲ್ಲಿ ಪ್ರಚಾರದ ಭರಾಟೆ ದಿನದಿನಂದ ಹೆಚ್ಚುತ್ತಿದ್ದು , ನಟರಾದ ಯಶ್‌ ಮತ್ತು ದರ್ಶನ್‌ ಸಮಲತಾ ಪರ ಭರ್ಜರಿ ಪ್ರಚಾರದಲ್ಲಿ ನಿರತರಾಗಿದ್ದು ಭಾರೀ ಸಂಖ್ಯೆಯ ಜನರನ್ನು ಸೆಳೆಯುತ್ತಿದ್ದಾರೆ.

About the author

ಕನ್ನಡ ಟುಡೆ

Leave a Comment