ಕ್ರೈಂ

ದಿಲ್ಲಿ ಪೊಲೀಸರಿಂದ ಸ್ಪೈಡರ್‌ಮ್ಯಾನ್‌ ಬಂಧನ

ಹೊಸದಿಲ್ಲಿ: ದಿಲ್ಲಿ ಪೊಲೀಸ ಸ್ಪೈಡರ್ ಮ್ಯಾನ್‌ನನ್ನು ಬಂಧಿಸಿದ್ದಾರೆ. ಅರೆ ಇದೇನಪ್ಪಾ ಅಂತೀರಾ? ‘ಸ್ಪೈಡರ್ ಮ್ಯಾನ್‌’ ಎಂದೇ ಹೆಸರುವಾಸಿಯಾಗಿದ್ದ 23 ವರ್ಷದ ಖತರ್ನಾಕ್ ಕಳ್ಳನೊಬ್ಬನನ್ನು ದಿಲ್ಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಶ್ಚಿಮ ದಿಲ್ಲಿಯಲ್ಲಿ 6 ಕೇಸು ಸೇರಿದಂತೆ ರಾಷ್ಟ್ರ ರಾಜಧಾನಿಯಾದ್ಯಂತ ಒಟ್ಟು 13 ಕೇಸುಗಳು ಆರೋಪಿಯ ಮೇಲಿದೆ. ತಡ ರಾತ್ರಿಯ ವೇಳೆ ಕಟ್ಟಡಗಳ ಡ್ರೈನ್‌ ಪೈಪ್‌ಗಳನ್ನು ಹತ್ತುವ ಮೂಲಕ ಮಾನಸ ಸರೋವರ ಪಾರ್ಕ್ ಹಾಗೂ ಕೀರ್ತಿ ನಗರದ ಮೊದಲನೇ ಹಾಗೂ ಎರಡನೇ ಮಹಡಿಯ ಕಟ್ಟಡಗಳನ್ನು ಏರಿ 23 ವರ್ಷದ ರವಿ ಕಳ್ಳತನ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಬಾಲ್ಕನಿ ಮೂಲಕ ಮನೆಗೆ ಎಂಟ್ರಿ ಕೊಡುತ್ತಿದ್ದ ಆತ ಹಣ, ಒಡವೆ ಮುಂತಾದ ಇತರೆ ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಿದ್ದ. ಬಳಿಕ ಜೇಬಿನಲ್ಲಿ ವಸ್ತುಗಳನ್ನು ಇಟ್ಟುಕೊಂಡು ಪೈಪ್‌ಗಳ ಮೂಲಕವೇ ಕೆಳಗೆ ಹೋಗುತ್ತಿದ್ದ ಹಿನ್ನೆಲೆ ಈ ವ್ಯಕ್ತಿಯನ್ನು ಸ್ಥಳೀಯರು ಸ್ಪೈಡರ್‌ ಮ್ಯಾನ್ ಎನ್ನುತ್ತಿದ್ದರು.

ಜತೆಗೆ, ಕಳ್ಳತನ ಮಾಡುವಾಗ ಕೆಂಪು ಶರ್ಟ್ ಅಥವಾ ಜೆರ್ಸಿಯನ್ನು ಧರಿಸುತ್ತಿದ್ದ. ತಿಲಕ್ ನಗರದ ಪೆಸಿಫಿಕ್ ಮಾಲ್‌ ಬಳಿ ಆರೋಪಿ ಸಿಕ್ಕಿಬಿದ್ದಾಗಲೂ ಕೆಂಪು ಜೆರ್ಸಿ ಧರಿಸಿದ್ದ ಎಂದು ಪಶ್ಚಿಮ ವಲಯದ ಡಿಸಿಪಿ ಮೋನಿಕಾ ಭಾರದ್ವಾಜ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಇನ್ನು, ರವಿಯನ್ನು ಬಂಧಿಸಲು ಹರಸಾಹಸ ಪಟ್ಟಿದ್ದ ಪೊಲೀಸರು, ಸಿಸಿ ಕ್ಯಾಮರಾ ದೃಶ್ಯಾವಳಿ ಹಾಗೂ ಇತರೆ ಪ್ಲಾನ್‌ಗಳ ಆಧಾರದ ಮೇಲೆ ಆತನನ್ನು ಬಂಧಿಸಲಾಗಿದೆ. ಇನ್ನು, ಬೆಳಗ್ಗಿನ ಜಾವ ಪೊಲೀಸ್‌ ಗಸ್ತು ತಿರುಗುವ ಪಡೆ ಹೋದ ಬಳಿಕ ತಾನು ಕಳ್ಳತನ ಮಾಡುತ್ತಿದ್ದೆ. ಜತೆಗೆ, ಲೂಟಿ ಮಾಡಿದ ವಸ್ತುಗಳನ್ನು ಸಹಚರನ ನೆರವಿನೊಂದಿಗೆ ಸಾಗಿಸುತ್ತಿದ್ದೆ ಎಂದು ಆತ ಬಾಯ್ಬಿಟ್ಟಿದ್ದಾನೆ. ಅಲ್ಲದೆ, ಜೂಜಾಡಲು ಈ ಹಣವನ್ನು ಬಳಸುತ್ತಿದ್ದುದ್ದಾಗಿಯೂ ರವಿ ಅಲಿಯಾಸ್ ಸ್ಪೈಡರ್‌ಮ್ಯಾನ್‌ ಒಪ್ಪಿಕೊಂಡಿದ್ದಾನೆಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment