ರಾಷ್ಟ್ರ ಸುದ್ದಿ

ದಿಲ್ಲಿ ಹೊಸ ವರ್ಷಾಚರಣೆ: 509 ಕುಡುಕ ವಾಹನ ಚಾಲಕರಿಗೆ ದಂಡ

ಹೊಸದಿಲ್ಲಿ : ಹೊಸ ವರ್ಷಾಚರಣೆಯ ಸಂಭ್ರಮೋಲ್ಲಾಸದಲ್ಲಿ ಮದ್ಯ ಸೇವನೆಗೈದು ನಿನ್ನೆ ಸೋಮವಾರ ರಾತ್ರಿ  ಮೋಟಾರು ವಾಹನ ಚಲಾಯಿಸಿದ 500 ಕ್ಕೂ ಅಧಿಕ ಚಾಲಕರಿಗೆ ದಿಲ್ಲಿ ಪೊಲೀಸರು ಸಖತ್ತಾಗಿ ದಂಡ ಹೇರಿ ಸರಕಾರದ ಖಜಾನೆಯನ್ನು ತುಂಬಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ  ಎಲ್ಲಿಯೂ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ 15,000 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಕುಡಿದು ವಾಹನ ಚಲಾಯಿಸುವವರನ್ನು ನಿಯಂತ್ರಿಸುವುದಕ್ಕಾಗಿ ವಿಶೇಷ ಟ್ರಾಫಿಕ್‌ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಕುಡಿದು ವಾಹನ ಚಲಾಯಿಸಿದ 509 ಮೋಟಾರು ವಾಹನ ಚಾಲಕರಿಗೆ ಪೊಲೀಸರು ದಂಡ ಹೇರಿದರು ಎಂದು ವರದಿಗಳು ತಿಳಿಸಿವೆ.

 

About the author

ಕನ್ನಡ ಟುಡೆ

Leave a Comment