ಅ೦ತರಾಷ್ಟ್ರೀಯ

ದೀಪಾವಳಿ ಆಚರಣೆ ಟ್ವೀಟ್ ನಲ್ಲಿ ಹಿಂದೂಗಳನ್ನೇ ಮರೆತ ಟ್ರಂಪ್

ವಾಷಿಂಗ್ಟನ್: ಕಳೆದ ವಾರ ಭಾರತ ಸೇರಿದಂತೆ ವಿಶ್ವಾದ್ಯಂತ ನೆಲೆಸಿರುವ ಭಾರತೀಯ ಸಮುದಾಯ ದೀಪಾವಳಿಯನ್ನು ಸಂಭ್ರಮ ಸಡಗರಗಳಿಂದ ಆಚರಿಸಿದೆ.

ಇದೀಗ ವಾರದ ಬಳಿಕ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿ ದೀಪಾವಳಿ ಆಚರಣೆ ನಡೆಸಿದ್ದಾರೆ.ತಾವು ದೀಪಾವಳಿ ಆಚರಿಸಿದ ಫೋಟೋಗಳನ್ನು ಟ್ವೀಟ್ ಮಾಡಿರುವ ಟ್ರಂಪ್ ದೀಪಾವಳಿ ಶುಭಾಶಯ ಕೋರುವಾಗ ಮಾತ್ರ ಹಿಂದೂಗಳನ್ನು ಹೆಸರಿಸದೆ ಎಡವಟ್ಟು ಮಾಡಿಕೊಂಡಿದ್ದಾರೆ.”ದೀಪಾವಳಿ ಬೌದ್ದರು, ಸಿಖ್ಖರು, ಜೈನರ ಹಬ್ಬ” ಎಂದು ಟ್ರಂಪ್ ಟ್ವೀಟ್ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಆದರೆ ಇದಾಗಿ ಸ್ವಲ್ಪದರಲ್ಲೇ ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳಲೆಂಬತೆ ಟ್ರಂಪ್ “ಹಿಂದೂಗಳ ದೀಪದ ಹಬ ದೀಪಾವಳಿಯನ್ನು ಶ್ವೇತಭವನದ ರೂಪ್ ನೆಲ್ಟ್ ಹಾಲ್ ನಲ್ಲಿ ಇಂದು ಮಧ್ಯಾಹ್ನ ಆಚರಿಸುವ ಶ್ರೇಷ್ಠ ಗೌರವ ನನಗೆ ಲಭಿಸಿದೆ.ಬಹಳ ವಿಶೇಷ ಜನ ಅವರಾಗಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.

 

 

About the author

ಕನ್ನಡ ಟುಡೆ

Leave a Comment