ಸಿನಿ ಸಮಾಚಾರ

ದೀಪಿಕಾ ಪಡುಕೋಣೆಯ ಬಹು ನಿರೀಕ್ಷಿತ ಚಪಾಕ್ ಚಿತ್ರದ ಫಸ್ಟ್ ಲುಕ್ ಬಿಡುಗಡೆ

ಆಸಿಡ್ ಸಂತ್ರಸ್ತೆ ಸಾಮಾಜಿಕ ಕಾರ್ಯಕರ್ತೆ ಲಕ್ಷ್ಮಿ ಅಗರ್ವಾಲ್ ಅವರ ಬದುಕಿನ ಕಥೆಯಾಧಾರಿತ ಚಿತ್ರ ಚಪಾಕ್ ನಲ್ಲಿ ದೀಪಿಕಾ ಪಡುಕೋಣೆ ಅಭಿನಯಿಸುತ್ತಿದ್ದಾರೆ ಎಂದು ಈ ಹಿಂದೆ ಸುದ್ದಿಯಾಗಿತ್ತು. ಅದರ ತಯಾರಿ ಆರಂಭವಾಗಿದ್ದು, ದೀಪಿಕಾರ ನೋಟ ಹೇಗಿರುತ್ತದೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಆ ದಿನ ಬಂದೇಬಿಟ್ಟಿದೆ.
ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ದೀಪಿಕಾ ಇಲ್ಲಿ ಮಾಲ್ಟಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಂದಿನಿಂದ ಶೂಟಿಂಗ್ ಆರಂಭವಾಗಲಿದೆ. ಸ್ವತಃ ದೀಪಿಕಾ ಚಿತ್ರದ ಫಸ್ಟ್ ಲುಕ್ ನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಾಕಿಕೊಂಡಿದ್ದಾರೆ. ಈ ಹಿಂದೆ ಅವರು ಚಪಾಕ್ ಚಿತ್ರದ ತಯಾರಿಯಲ್ಲಿ, ಗಾಢ ಚರ್ಚೆಯಲ್ಲಿ ತೊಡಗಿರುವ ಚಿತ್ರವನ್ನು ಶೇರ್ ಮಾಡಿಕೊಂಡಿದ್ದರು. ಮೇಘನಾ ಗುಲ್ಜಾರ್ ನಿರ್ದೇಶನದ ಚಪಾಕ್ ಚಿತ್ರಕ್ಕೆ ದೀಪಿಕಾ ಅವರು ಸಹ ಫಾಕ್ಸ್ ಸ್ಟಾರ್ ಸ್ಟುಡಿಯೊ ಜೊತೆ ಬಂಡವಾಳ ಹೂಡಿದ್ದಾರೆ. ಲಕ್ಷ್ಮಿ ಅಗರ್ವಾಲ ಮೇಲೆ 15 ವರ್ಷದ ಹುಡುಗಿಯಾಗಿದ್ದಾಗ ತಮ್ಮ ಪರಿಚಯದ 32 ವರ್ಷದ ವ್ಯಕ್ತಿಯಿಂದ ಆಸಿಡ್ ದಾಳಿಗೊಳಗಾಗಿದ್ದರು. ನಂತರ ಹಲವು ಸರ್ಜರಿಗೊಳಗಾಗಿದ್ದರು. ನಂತರ ಲಕ್ಷ್ಮಿ ಆಸಿಡ್ ಸಂತ್ರಸ್ತರ ಬದುಕಿಗಾಗಿ ಮತ್ತು ಅಂತಹ ದಾಳಿಗಳನ್ನು ನಿಲ್ಲಿಸುವ ನಿಟ್ಟಿನಲ್ಲಿ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ಆಸಿಡ್ ದಾಳಿ ನಂತದ ಲಕ್ಷ್ಮಿ ಬದುಕು, ಸುಪ್ರೀಂ ಕೋರ್ಟ್ ನಲ್ಲಿ ಕಾನೂನು ಹೋರಾಟ ಮತ್ತು ಅದರಿಂದಾಗಿ 2013ರಲ್ಲಿ ಆಸಿಡ್ ಕಾನೂನಿಗೆ ತಂದ ತಿದ್ದುಪಡಿ ಬಗ್ಗೆ ಚಿತ್ರದಲ್ಲಿ ಕಥೆಯಿರುತ್ತದೆ.

About the author

ಕನ್ನಡ ಟುಡೆ

Leave a Comment