ಸಿನಿ ಸಮಾಚಾರ

ದೀಪಿಕಾ ಪಡುಕೋಣೆ ಮುಡಿಗೆ ಏಷ್ಯಾದ ಸೆಕ್ಸಿ ಮಹಿಳೆ ಅವಾರ್ಡ್

ಇತ್ತೀಚಿಗಷ್ಟೆ ಅತ್ಯಂತ  ಅದ್ದೂರಿಯಾಗಿ ಮದುವೆ ಮತ್ತು ಆರತಕ್ಷತೆ ಮುಗಿಸಿದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ  ಏಷ್ಯಾದ ಅತ್ಯಂತ ಸೆಕ್ಸಿ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಕಳೆದ ಬಾರಿ ಮೊದಲ ಸ್ಥಾನ ಗಳಿಸಿದ್ದ ಪ್ರಿಯಾಂಕಾ ಚೋಪ್ರಾ ಈ ಬಾರಿ ಎರಡನೇ ಸ್ಥಾನದಲ್ಲಿದ್ದಾರೆ.

ಲಂಡನ್ ನ ಈಸ್ಟರ್ನ್  ಐ ಸಾಪ್ತಾಹಿಕ  ನಡೆಸುವ ಏಷ್ಯಾದ 50 ಸೆಕ್ಸಿ ಮಹಿಳೆಯರು ಎಂಬ ಆಯ್ಕೆ ಪ್ರಕ್ರಿಯೆಯಲ್ಲಿ ಜನರು ಪಾಲ್ಗೊಂಡು ತಮ್ಮಿಷ್ಟದ ಸೆಲೆಬ್ರಿಟಿಗಳನ್ನು ಮತ ಚಲಾಯಿಸುತ್ತಾರೆ. ಬಾಲಿವುಡ್ ವಿವಾದಾತೀತ ಕ್ವೀನ್ ಆಗಿರುವ ದೀಪಿಕಾ ಪಡುಕೋಣೆ ಮಾನಸಿಕ ಅಸ್ವಸ್ಛರ ಬಗೆಗಿನ ಜಾಗೃತಿ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಾಗಿ ಈ ಗೌರವಕ್ಕೆ ಅರ್ಹರಾಗಿದ್ದಾರೆ ಎಂದು ಈಸ್ಟರ್ನ್ ಐ ಸಾಪ್ತಾಹಿಕ ಮನಂರಜನಾ ವಿಭಾಗದ ಸಂಪಾದಕ ಅಸ್ಜದ್ ನಜೀರ್ ಹೇಳಿದ್ದಾರೆ

About the author

ಕನ್ನಡ ಟುಡೆ

Leave a Comment