ರಾಜ್ಯ ಸುದ್ದಿ

ದುಃಖದಲ್ಲಿ ಅಂಬಿಯ ನೆಚ್ಚಿನ ನಾಯಿಗಳು

ಬೆಂಗಳೂರು: ಅಂಬಿಯ ಪ್ರೀತಿಯ ‘ಕನ್ವರ್‌’ ಮತ್ತು ‘ಬುಲ್‌ ಬುಲ್‌’ ಎರಡೂ ಶನಿವಾರ ರಾತ್ರಿಯಿಂದ ತುಂಬಾ ಕಂಗಾಲಾಗಿದ್ದವು. ಏನಾಗಿದೆ ಎಂದು ಗೊತ್ತಾಗುತ್ತಿಲ್ಲ. ಆದರೂ ತುಂಬಾ ಅಳುತ್ತಿದ್ದವು ಎಂದು ಕುಟುಂಬಕ್ಕೆ ಹತ್ತಿರವಿದ್ದವರು ತಿಳಿಸಿದರು. ಅಂಬಿಯನ್ನು ಕನ್ನಡ ಜನಮಾನಸಕ್ಕೆ ಪರಿಚಯಿಸಿದ ಸಿನಿಮಾಗಳಲ್ಲಿ ‘ನಾಗರಹಾವು’ ಕೂಡ ಒಂದು. ಈ ಸಿನಿಮಾದ ಅಚ್ಚು ಮೆಚ್ಚಿನ ಪಾತ್ರಗಳನ್ನು ಇವರು ತಮ್ಮ ಜತೆಗೇ ಇಟ್ಟುಕೊಂಡಿದ್ದರು. ತಾವೇ ಸಾಕಿದ್ದ ಮುದ್ದಿನ ನಾಯಿಗಳಿಗೆ ‘ಕನ್ವರ್‌’ ಮತ್ತು ‘ಬುಲ್‌ ಬುಲ್‌’ ಎನ್ನುವ ಹೆಸರಿಟ್ಟಿದ್ದರು. ಗಂಡು ನಾಯಿ’ಕನ್ವರ್‌’ ಆದರೆ, ಹೆಣ್ಣು ನಾಯಿಗೆ ‘ಬುಲ್‌ ಬುಲ್‌’ ಎಂದು ಹೆಸರಿಟ್ಟಿದ್ದರು. ಶನಿವಾರ ರಾತ್ರಿಯಿಂದ ಇವೆರೆಡೂ ತುಂಬಾ ಗೋಳಾಡುತ್ತಿದ್ದವು ಎಂದು ಜೆ.ಪಿ.ನಗರದ ಅಂಬಿ ಮನೆಯಿಂದ ಸಮೀಪದಲ್ಲೇ ಇರುವ ಸುಮಲತಾ ತಾಯಿ ಮನೆಗೆ ಕರೆದುಕೊಂಡು ಹೋಗಿ ಬಿಡಲಾಗಿದೆ.

About the author

ಕನ್ನಡ ಟುಡೆ

Leave a Comment